ರಿಪ್ಪನ್‌ಪೇಟೆ : ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ನೀಡಿರುವ ಉನ್ನತಮಟ್ಟದ ಶಿಕ್ಷಣ ವ್ಯವಸ್ಥೆ,ಉಚಿತ ನೀರಿನ ವ್ಯವಸ್ಥೆ,ಉಚಿತ ವಿದ್ಯುತ್,ಆರೋಗ್ಯ ವ್ಯವಸ್ಥೆಯನ್ನು ಕರ್ನಾಟಕದ ಜನಸಾಮಾನ್ಯರು ಬಯಸುತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಹಾಗೂ ಸ್ಟಾರ್ ಕ್ಯಾಂಪೇನರ್ ಶಹನವಾಜ್ ಹಿಂದೂಸ್ಥಾನಿ ಹೇಳಿದರು.
ರಿಪ್ಪನ್‌ಪೇಟೆ ಪಟ್ಟಣದಲ್ಲಿ ಸಾಗರ ಕ್ಷೇತ್ರದ ಆಪ್ ಅಭ್ಯರ್ಥಿ ಕೆ ದಿವಾಕರ್ ಪರ ಮತಯಾಚನೆ ನಡೆಸಿ ಎಎಪಿ ಕಛೇರಿಯಲ್ಲಿ ಅಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಅದರಲ್ಲಿಯೂ ಕರ್ನಾಟಕದಲ್ಲಿ ಇನ್ನೂ ಹೆಚ್ಚಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಹೇಳುತ್ತಿವೆ ಅದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಎಎಪಿ ಪಕ್ಷಕ್ಕೆ ಒಂದು ಅವಕಾಶ ಮಾಡಿಕೊಡಿ ದೆಹಲಿಯಂತೆ ಕರ್ನಾಟಕದಲ್ಲಿ ಬದಲಾವಣೆ ಮಾಡಿ ಮತದಾರರ ಮನ ಗೆಲ್ಲುವುದಾಗಿ ಹೇಳಿದರು.
ಜನರ ತೆರಿಗೆ ಹಣವನ್ನು ಸದ್ಬಳಕೆ ಮಾಡುವ ಮೂಲಕ ಆಮ್ ಆದ್ಮಿ ಪಕ್ಷ ದೆಹಲಿ ಹಾಗೂ ಪಂಜಾಬ್ ನಲ್ಲಿ ಜನರಿಗೆ ಉಚಿತ ವಿದ್ಯುತ್ ,ನೀರು ಮತ್ತು ಶಿಕ್ಷಣ,ಔಷದಿ ನೀಡುತ್ತದೆ.ದೆಹಲಿಯ ಸರ್ಕಾರಿ ಶಾಲೆಗಳು ಹೈಟೆಕ್ ರೂಪದಲ್ಲಿದ್ದು ಇಲ್ಲಿ ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಲಾಗುತ್ತಿದೆ.
22222
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಉಚಿತ ವಿದ್ಯುತ್, ನೀರು ಉತ್ತಮ ಆಸ್ಪತ್ರೆಯ ವ್ಯವಸ್ಥೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಗುತ್ತದೆ.
ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಹೊಸನಗರ ಹಾಗೂ ಸಾಗರ ತಾಲೂಕಿನ ಜನತೆ ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ ಅವರಿಗೆ ಭೂಮಿಯ ಹಕ್ಕು ನೀಡುವಲ್ಲಿ ಎಲ್ಲಾ ಪಕ್ಷಗಳು ಎಡವಿದೆ ಎಂದರು.
ಈ ಭಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಎಪಿ ಪಕ್ಷಕ್ಕೊಂದು ಅವಕಾಶ ಮಾಡಿಕೊಡುವಂತೆ ಮತದಾರ ಪ್ರಭುಗಳು ಮನಸ್ಸು ಮಾಡಿ ನಿಷ್ಟಾವಂತ ಮತ್ತು ಸಜ್ಜನ ವ್ಯಕ್ತಿತ್ವದ ಸಾಗರ-ಹೊಸನಗರ ಕ್ಷೇತ್ರದ ಎಎಪಿ ಅಭ್ಯರ್ಥಿ ಕೆ.ದಿವಾಕರ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಕಿರಣ್ , ಮುಖಂಡರಾದ ಸಂತೋಷ್ , ಹಸನಬ್ಬ ,ಹನೀಫ್, ರಾಜು ಚನ್ನಕೊಪ್ಪ,ಕುಕ್ಕಳಲೇ ಈಶ್ವರಪ್ಪ,ಕ್ರಾಂತಿ ಹಾಗೂ
ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.