Headlines

ರಿಪ್ಪನ್‌ಪೇಟೆ – ಬಿಸಿಲ ಬೇಗೆಗೆ ತಂಪೆರೆದ ಮಳೆ|Rain

ರಿಪ್ಪನ್‌ಪೇಟೆ : ಬಿಸಿಲ ಧಗೆ ಪಟ್ಟಣದಲ್ಲಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ,ಶನಿವಾರ ಮಳೆಯ ಸಿಂಚನವು ಕೊಂಚ ತಂಪನೆರೆಯಿತು. ಸಂಜೆಯಿಂದ ಪಟ್ಟಣದ ವಿವಿಧೆಡೆ ಮಳೆ ಸುರಿಯಿತು.




ರಿಪ್ಪನ್‌ಪೇಟೆ ಪಟ್ಟಣ , ಅರಸಾಳು ,ಕೆಂಚನಾಲ ,ಹೆದ್ದಾರಿಪುರ ಹಾಗೂ ಚಿಕ್ಕಜೇನಿ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿಡದೇ ಮಳೆ ಸುರಿಯಿತು.


ಏಕಾಏಕಿ ಸುರಿದ ಮಳೆಯಿಂದಾಗಿ, ಸಾರ್ವಜನಿಕರು ದಿಕ್ಕು ತೋಚದೆ ಪರದಾಡಿದರು. ಮಳೆಗೆ ನೆನೆಯದಂತೆ ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ ಅಲ್ಲಲ್ಲಿ ಕಂಡುಬಂತು.













About The Author

Leave a Reply

Your email address will not be published. Required fields are marked *