ರಿಪ್ಪನ್‌ಪೇಟೆ ಚಿಪ್ಪಿಗರ ಕೆರೆಯ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.
ಚಿಪ್ಪಿಗರ ಕೆರೆ ಬಳಿಯ ಪಾರ್ಕ್ ಸಮೀಪ ಸುಮಾರು 45 ರಿಂದ 50 ವಯೋಮಾನದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಟ್ಟಣದಲ್ಲಿ ಕಳೆದ ಕೆಲವು ವರ್ಷಗಳಿಂದ ಚಿಂದಿ ಆಯುತಿದ್ದ ಮಹಿಳೆ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ,ಸದಸ್ಯರಾದ ಆಸೀಫ಼್ ಭಾಷಾಸಾಬ್ ,ಪ್ರಕಾಶ್ ಪಾಲೇಕರ್ ಮತ್ತು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅನಾಥ ಮಹಿಳೆಯ ಶವದ ಅಂತಿಮ ಶವಸಂಸ್ಕಾರವನ್ನು ರಿಪ್ಪನ್‌ಪೇಟೆಯ ಎಸ್ ಎಸ್ ಎಫ಼್ ಸಂಘಟನೆಯ ಕಾರ್ಯಕರ್ತರು ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.