ದೇವರ ಹರಕೆಗೆ ತಂದಿದ್ದ ಕುರಿ ರಾತ್ರೋರಾತ್ರಿ ಮಾಯ , ಬೆಳಗೆದ್ದು ಅಯ್ಯೋಯ್ಯೋ ಅಂದ್ರು – ನಿಜವಾಗಿಯೂ ನಡೆದಿದ್ದೇನು..?
ತೀರ್ಥಹಳ್ಳಿ : ದೇವರು ಎಂದರೇ ಅದೇನೋ ಭಯ ಭಕ್ತಿ ಅದರ ಜೊತೆಗೆ ಕೆಲವೊಂದು ನಂಬಿಕೆ. ಅದೇ ನಂಬಿಕೆಯಿಂದ ದೇವರಿಗಾಗಿ ಐದು ಕುರಿಯನ್ನು ಹರಕೆಯ ಸಲುವಾಗಿ ರಾತ್ರಿ ತಂದಿದ್ದರು. ಆದರೆ ಮಾರನೇ ದಿನ ಹರಕೆಗೆ ಕುರಿಯನ್ನು ಕಡಿಯಲು ನೋಡುವಾಗ ಕುರಿ ಮಂಗಮಾಯವಾಗಿದ್ದ ಘಟನೆ ಕುಚ್ಚಲು ಎಂಬ ಗ್ರಾಮದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪದ ಕುಚ್ಚಲು ಎಂಬ ಗ್ರಾಮದಲ್ಲಿ ಭೂತರಾಯ ಉರಿಚೌಡಿ ಎಂಬ ಗ್ರಾಮ ದೇವತೆಗಳಿಗಾಗಿ ಹರಕೆ ಸಲ್ಲಿಸುವ ಸಲುವಾಗಿ ಭದ್ರಾವತಿ ಕಡೆಯಿಂದ ಐದು ಕುರಿಯನ್ನು ತರಲಾಗಿತ್ತು. ರಾತ್ರಿ ಇದ್ದ ಕುರಿ ಬೆಳಗ್ಗೆ ಮಾಯವಾಗಿತ್ತು. ಕುರಿಯನ್ನು ದೇವರಿಗೆ ಎಂದು ತಂದಿದ್ದು ದೇವರ ಬದಲಾಗಿ ಮತ್ತೊಬ್ಬರ ಪಾಲಾಗಿದೆ.
ದೇವರಿಗೆ ತಂದ ಕುರಿಗಳನ್ನು ಕಳ್ಳತನ ಮಾಡಲಾಗಿದೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ನಿಜವಾಗಿಯೂ ಕಳ್ಳತನವೇ ಆಗಿದ್ದಾ? ಅಥವಾ ಬೇರೆ ಏನಾದರು ಪವಾಡ ನಡೆಯಿತಾ? ಎಂಬ ಚರ್ಚೆಗಳು ಶುರುವಾಗಿದೆ. ಒಟ್ಟಿನಲ್ಲಿ ದೇವರಿಗಾಗಿ ತಂದಿದ್ದ ಕುರಿಗಳ ಜೀವ ಸದ್ಯದ ಮಟ್ಟಿಗೆ ಉಳಿದಂತೆ ಕಾಣಿಸುತ್ತಿದೆ ಎಂಬ ಹಾಸ್ಯದ ಮಾತುಗಳು ಕೇಳಿ ಬಂದಿವೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್