w
Headlines
Home » ಹುಲಿ ಗಣತಿಗಾಗಿ ಅಳವಡಿಸಿದ್ದ ಡಿಜಿಟಲ್ ಕ್ಯಾಮೆರಾ ಕಳವು

ಹುಲಿ ಗಣತಿಗಾಗಿ ಅಳವಡಿಸಿದ್ದ ಡಿಜಿಟಲ್ ಕ್ಯಾಮೆರಾ ಕಳವು

GridArt 20260515

ಹುಲಿ ಗಣತಿಗಾಗಿ ಅಳವಡಿಸಿದ್ದ ಡಿಜಿಟಲ್ ಕ್ಯಾಮೆರಾ ಕಳವು

A digital camera installed by the Forest Department for tiger census near Gollarakoppa village in Shivamogga was stolen along with memory cards. A case has been registered at Kumsi Police Station.

ಶಿವಮೊಗ್ಗ: ತಾಲೂಕಿನ ಗೊಲ್ಲರಕೊಪ್ಪ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಹುಲಿ ಗಣತಿಗಾಗಿ ಅಳವಡಿಸಿದ್ದ ಡಿಜಿಟಲ್ ಕ್ಯಾಮೆರಾವನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆಯು ಗೊಲ್ಲರಕೊಪ್ಪ ಗ್ರಾಮದ ವಡ್ಡಗಟ್ಟಿಸರ ಕೆರೆಯ ರಸ್ತೆ ಪಕ್ಕದಲ್ಲಿ ಹುಲಿ ಚಲನವಲನಗಳ ಮಾಹಿತಿ ಸಂಗ್ರಹಿಸಲು ಡಿಜಿಟಲ್ ಕ್ಯಾಮೆರಾವನ್ನು ಅಳವಡಿಸಿತ್ತು. ನಿಯಮಿತ ಗಸ್ತಿನ ವೇಳೆ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಕ್ಯಾಮೆರಾ ಹಾಗೂ ಅದಕ್ಕೆ ಅಳವಡಿಸಿದ್ದ ಮೆಮೊರಿ ಕಾರ್ಡ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಳುವಾದ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್‌ಗಳ ಒಟ್ಟು ಮೌಲ್ಯ ಸುಮಾರು ₹25 ಸಾವಿರ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಆಯನೂರು ವಲಯದ ಮಲ್ಲಾಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶರತ್ ಕುಮಾರ್ ಅವರು ದೂರು ನೀಡಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.