ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಭೇಟೆಯಾಡಿದ ಹೊಸನಗರದ ಯುವಕ
ಹೊಸನಗರ : ತಾಲೂಕಿನ ಕಾರಣಗಿರಿಯ ಯುವಕನೊಬ್ಬ ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ.
ತಾಲ್ಲೂಕಿನ ಕಾರಣಗಿರಿ ಗ್ರಾಮದ ವರ್ತಕ ಜಯರಾಮ್ ಮತ್ತು ರತ್ನ ದಂಪತಿಗಳ ಪುತ್ರ ಜೆ. ಸುಮನ್ ಸಾಧನೆಗೈದ ಯುವಕನಾಗಿದ್ದಾನೆ.
ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸನಗರ ತಾಲ್ಲೂಕಿನ ಜೆ. ಸುಮನ್ ಅವರು ಅಂತಿಮ ವರ್ಷದ ಆರು ಪರೀಕ್ಷೆಗಳಲ್ಲಿ ಆರರಲ್ಲೂ ಉತ್ತಮ ಫಲಿತಾಂಶ ದಾಖಲಿಸಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಫ್ರಾನ್ಸ್ ಅಕಾಡೆಮಿಯಿಂದ ಅತ್ಯುತ್ತಮ ದಂತ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಪೆರ್ರಿ ಪೀಚರ್ಡ್ ಎಂಬ ಪುರಸ್ಕಾರವನ್ನು ಪಡೆದಿರುತ್ತಾರೆ.
 
                         
                         
                         
                         
                         
                         
                         
                         
                         
                        