POSTMANNEWS

ನೈಜ ಸುದ್ದಿ ನೇರ ಬಿತ್ತರ..

ಮಧ್ಯರಾತ್ರಿ ಹೈಡ್ರಾಮಾ: ಅದು ‘ಸ್ಯಾಂಡ್ ಮಾಫಿಯಾ’ ದ್ವೇಷವೋ? ಅಥವಾ ‘ಜಾತಿ ನಿಂದನೆ’ಯ ಸಂಘರ್ಷವೋ? ಆನಂದಪುರದಲ್ಲಿ ನಡೆದಿದ್ದೇನು?

Questions arise over police procedure in the Anandapur case as counter-complaints, SC/ST Act allegations, and delayed FIR registration trigger demands for a fair investigation.

ಮಧ್ಯರಾತ್ರಿ ಹೈಡ್ರಾಮಾ: ಅದು ‘ಸ್ಯಾಂಡ್ ಮಾಫಿಯಾ’ ದ್ವೇಷವೋ? ಅಥವಾ ‘ಜಾತಿ ನಿಂದನೆ’ಯ ಸಂಘರ್ಷವೋ? ಆನಂದಪುರದಲ್ಲಿ ನಡೆದಿದ್ದೇನು?

ಮರಳು ಮಾಫ಼ಿಯಾ ದಾಂಧಲೆ ಪ್ರಕರಣಕ್ಕೆ ಟ್ವಿಸ್ಟ್ : ದಲಿತ ಸಂಘರ್ಷ ಸಮಿತಿಯಿಂದ ಪೊಲೀಸರ ವಿರುದ್ಧ ಗಂಭೀರ ಆರೋಪ

ಸಾಗರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ದೂರು ಸಂಬಂಧ ದಾಖಲಾದ ಕೊಲೆ ಯತ್ನ ಪ್ರಕರಣ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಈ ಪ್ರಕರಣದ ತನಿಖೆಯಲ್ಲೇ ಗಂಭೀರ ಲೋಪ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆದಿದೆಯೆಂಬ ಆರೋಪಗಳು ಕೇಳಿಬಂದಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ್ ಬಣ) ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಅಂದಿನ ಹೆಚ್‌ಎಸ್‌ಓ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದು, ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದೆ.

ದಲಿತರ ದೂರನ್ನು ಕಡೆಗಣಿಸಿ, ವಿರುದ್ಧ ಕೇಸ್ ದಾಖಲಿಸಿದರೇ?

ದಲಿತ ಸಂಘರ್ಷ ಸಮಿತಿಯ ಸಂಚಾಲಕ ನಟರಾಜ್ ಗೇರ್ ಬೀಸ್ ಅವರು, ಆನಂದಪುರ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆಯವರೆಗೆ ಧರಣಿ ಸತ್ಯಾಗ್ರಹ ನಡೆಸಿ, ಸಾಗರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ಜನವರಿ 15ರ ಮಧ್ಯರಾತ್ರಿ, ಶರತ್ ಚಂದಳ್ಳಿ ಎಂಬವರು ನಾಲೈದು ಜನರನ್ನು ಕರೆದುಕೊಂಡು ಕುಡಿದ ಮತ್ತಿನಲ್ಲಿ ದರ್ಶನ್ ಎಂಬುವವರ ಮನೆಗೆ ನುಗ್ಗಿ ದಾಂದಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಕೊರ್ಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ, ದರ್ಶನ್ ಹಾಗೂ ಶಿವರಾಮ್ ಬಿನ್ ಸೋಮಶೇಖರ ಅವರು ಆನಂದಪುರದ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಶರತ್ ಹಾಗೂ ಅವರ ಸಹಚರರು ಮಾರುತಿ ಬ್ರೀಜಾ ವಾಹನದಲ್ಲಿ ಬಂದು ಅಡ್ಡಗಟ್ಟಿ ಕಿಡ್ನಾಪ್, ಕೊಲೆ ಯತ್ನ, ಜಾತಿ ನಿಂದನೆ ಹಾಗೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಎಂಎಲ್‌ಸಿ ಇದ್ದರೂ FIR ಯಾಕೆ ದಾಖಲಾಗಲಿಲ್ಲ?

ಇದೇ ದಿನ ರಾತ್ರಿ, ದರ್ಶನ್ ಹಾಗೂ ಶಿವರಾಮ್ ಅವರು ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಎಂಎಲ್‌ಸಿ ಮಾಡಿಸಿಕೊಂಡಿದ್ದು, ವೈದ್ಯಾಧಿಕಾರಿಗಳು ಸಂಬಂಧಪಟ್ಟ ಠಾಣೆಗೆ ಎಚ್‌ಎಂಆರ್ ರಿಪೋರ್ಟ್ ಸಲ್ಲಿಸಿದ್ದರೂ ಸಹ, ಆನಂದಪುರ ಠಾಣೆಯ ಅಂದಿನ ಹೆಚ್‌ಎಸ್‌ಓ ಅವರು ಇವರ ಹೇಳಿಕೆ ಪಡೆಯದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಆದರೆ, ಶರತ್ ಚಂದಳ್ಳಿ ಅವರ ಹೇಳಿಕೆಯನ್ನು ಮಾತ್ರ ಪಡೆದು, ದರ್ಶನ್ ಮತ್ತು ಶಿವರಾಮ್ ಸೇರಿ ಮೂವರ ವಿರುದ್ಧ ಆತುರಾತುರವಾಗಿ ಸೆಕ್ಷನ್ 307 (ಕೊಲೆ ಯತ್ನ) ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.

ದಲಿತನ ಕಿಡ್ನಾಪ್–ಜಾತಿ ನಿಂದನೆ ದೂರಿಗೆ ಮೌನ ಏಕೆ?

ಶಿವರಾಮ್ ಬಿನ್ ಸೋಮಶೇಖರ ಅವರು ಕಿಡ್ನಾಪ್, ಕೊಲೆ ಯತ್ನ ಹಾಗೂ ಜಾತಿ ನಿಂದನೆಗೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಸಹ, ಅದನ್ನು ಪ್ರಕರಣವಾಗಿ ದಾಖಲಿಸಿಕೊಳ್ಳದೇ, ದಲಿತರ ಮೇಲೆಯೇ ಸುಳ್ಳು ಕೇಸ್ ದಾಖಲಿಸಲಾಗಿದೆ.ಇದು ದಲಿತರ ಮೇಲೆ ನಡೆದ ದೌರ್ಜನ್ಯವಲ್ಲವೇ? ಎಂದು ಸಂಘಟನೆಯು ಪ್ರಶ್ನಿಸಿದೆ.

ಇನ್ನಷ್ಟು ಗಂಭೀರವಾಗಿ, ಎಫ್‌ಐಆರ್ ಯಾಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದಾಗ, ಠಾಣಾಧಿಕಾರಿಗಳು ಎಸ್‌ಪಿ ಮತ್ತು ಡಿವೈಎಸ್‌ಪಿ ಕಚೇರಿಯ ಕಡೆಗೆ ಬೊಟ್ಟು ತೋರಿಸಿ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಪ್ರತಿಭಟನೆಗೆ ಹೆದರಿ ತಡವಾಗಿ FIR?


ಸಂಘಟನೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ನಂತರವೇ, ಜನವರಿ 27ರಂದು ತಡವಾಗಿ ಎಫ್‌ಐಆರ್ ದಾಖಲಿಸಲಾಗಿದೆ, ಇದು ಪ್ರಕರಣದಲ್ಲಿ ಸಂಶಯಕ್ಕೆ ಕಾರಣವಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.

ಇತ್ತ ವಕೀಲ ಶರತ್ ನೀಡಿದ ದೂರು ಏನು?

ಇತ್ತ, ಸಾಗರ ತಾಲ್ಲೂಕಿನ ಕೊರ್ಲಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿ, ಹೊಸನಗರ ತಾಲ್ಲೂಕಿನ ಚಂದಳ್ಳಿ ಗ್ರಾಮದ 28 ವರ್ಷದ ವಕೀಲರಾದ ಶರತ್ ಅವರು, ಅಕ್ರಮ ಮರಳು ಸಾಗಣೆ ಬಗ್ಗೆ 112 ಸಹಾಯವಾಣಿಗೆ ದೂರು ನೀಡಿದ್ದ ಹಿನ್ನೆಲೆ, ತಮಗೆ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಕಿಡ್ನಾಪ್ ಹಾಗೂ ಕೊಲೆ ಯತ್ನ ಮಾಡಲಾಗಿದೆ ಎಂದು ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಈ ಸಂಬಂಧ ದರ್ಶನ್, ಪ್ರವೀಣ್ @ ಪುಟ್ಟ, ಶಿವರಾಮ, ದಿವಾಕರ ಸೇರಿ ಇತರರ ವಿರುದ್ಧ ಗಂಭೀರ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಂದೇ ಘಟನೆಯಲ್ಲಿ ಎರಡು ಕಥೆಗಳೇ?


ಒಂದೇ ದಿನ, ಒಂದೇ ಸ್ಥಳದಲ್ಲಿ ನಡೆದ ಘಟನೆಯಲ್ಲಿ ಒಬ್ಬರು “ಅಕ್ರಮ ಮರಳು ದೂರುದಾರ” ಎಂದು,ಇನ್ನೊಬ್ಬರು “ದಲಿತನ ಮೇಲೆ ಕಿಡ್ನಾಪ್ ಮತ್ತು ಜಾತಿ ನಿಂದನೆ” ಎಂದು ಆರೋಪಿಸುತ್ತಿರುವುದು,

ಎಚ್ಚರಿಕೆ: ಹೋರಾಟ ತೀವ್ರಗೊಳ್ಳಲಿದೆ

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದುರ್ಗಾ ಭೋವಿ ಮಾತನಾಡಿ,“ನಮ್ಮ ಬೇಡಿಕೆಗಳು ಈಡೇರದಿದ್ದರೆ ಆನಂದಪುರದಿಂದ ಶಿವಮೊಗ್ಗ ಎಸ್‌ಪಿ ಕಚೇರಿವರೆಗೆ ಪಾದಯಾತ್ರೆ ಮಾಡಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ”ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶೇಖರ್, ಉಮೇಶ್ ಸುಂಟಿಕೊಪ್ಪ, ಮಂಜಣ್ಣ ಗಾಂಧಿನಗರ, ಗಣಪತಿ ಇರುವಕ್ಕಿ, ಹರೀಶ ಇರುವಕ್ಕಿ, ಪೃಥ್ವಿ ಇರುವಕ್ಕಿ, ಗಂಗಾಧರ ಎಡೇಹಳ್ಳಿ, ದೊರೆ ಅಂದಾಸುರ, ಮಂಜುನಾಥ್ ಆಚಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಧ್ಯರಾತ್ರಿ ಹೈಡ್ರಾಮಾ: ಅದು ‘ಸ್ಯಾಂಡ್ ಮಾಫಿಯಾ’ ದ್ವೇಷವೋ? ಅಥವಾ ‘ಜಾತಿ ನಿಂದನೆ’ಯ ಸಂಘರ್ಷವೋ? ಆನಂದಪುರದಲ್ಲಿ ನಡೆದಿದ್ದೇನು?

ಜನವರಿ 15 ಮತ್ತು 16ರ ಸಂಕ್ರಾಂತಿಯ ಚಳಿ ರಾತ್ರಿ. ಸಮಯ ಮಧ್ಯರಾತ್ರಿ ದಾಟಿ ಸುಮಾರು 12:30 ರಿಂದ 1:30 ರ ನಡುವೆ. ಸಾಗರ ತಾಲ್ಲೂಕಿನ ಕೊರ್ಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ವಾಹನಗಳ ಕರ್ಕಶ ಶಬ್ದ, ಕಿರುಚಾಟ, ಮತ್ತು ರಕ್ತಸಿಕ್ತ ಘಟನೆ ನಡೆದಿದೆ. ಆದರೆ, ಬೆಳಗಾಗುವಷ್ಟರಲ್ಲಿ ಈ ಘಟನೆ ಎರಡು ಭಿನ್ನ ರೂಪಗಳನ್ನು ಪಡೆದುಕೊಂಡಿದೆ. ಒಂದು ಕಡೆ “ಅಕ್ರಮ ಮರಳು ದಂಧೆಯ ವಿರುದ್ಧ ದನಿ ಎತ್ತಿದ ವಕೀಲನ ಮೇಲಿನ ಹಲ್ಲೆ” ಎನ್ನಲಾಗುತ್ತಿದ್ದರೆ, ಇನ್ನೊಂದೆಡೆ “ದಲಿತರ ಮೇಲಿನ ದೌರ್ಜನ್ಯ ಮತ್ತು ಪೊಲೀಸ್ ಇಲಾಖೆಯ ತಾರತಮ್ಯ” ಎಂದು ಬಿಂಬಿತವಾಗುತ್ತಿದೆ.

ಅಷ್ಟಕ್ಕೂ ಆ ಕತ್ತಲ ರಾತ್ರಿ ಅಲ್ಲಿ ನಡೆದಿದ್ದೇನು? ಇಲ್ಲಿದೆ ಈ ನಿಗೂಢ ಪ್ರಕರಣದ ‘ಇನ್ವೆಸ್ಟಿಗೇಷನ್ ರಿಪೋರ್ಟ್’.

ವಕೀಲರ ಮೇಲಿನ ‘ಮಾರಣಾಂತಿಕ’ ದಾಳಿ

​ಮೊದಲ ದೂರಿನ ಪ್ರಕಾರ, ಶರತ್ ಚಂದಳ್ಳಿ, ಒಬ್ಬ ಯುವ ವಕೀಲ. ಇವರು ಅಕ್ರಮ ಮರಳು ಸಾಗಣೆಯ ವಿರುದ್ಧ 112 ಗೆ ಕರೆ ಮಾಡಿ ದೂರು ನೀಡಿದ್ದರು. ಇದೇ ಕಾರಣಕ್ಕೆ ಮರಳು ಮಾಫಿಯಾದ ಕಣ್ಣು ಇವರ ಮೇಲೆ ಬಿತ್ತು ಎನ್ನಲಾಗಿದೆ.​ಜನವರಿ 16ರಂದು ಶರತ್ ಅವರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದಾಗ, ಸ್ಕಾರ್ಪಿಯೋ ಮತ್ತು ಸ್ವಿಫ್ಟ್ ಕಾರುಗಳಲ್ಲಿ ಬಂದ ಗ್ಯಾಂಗ್ (ದರ್ಶನ್, ಶಿವರಾಮ್, ಪ್ರವೀಣ್, ದಿವಾಕರ್ ಮತ್ತು ಇತರರು) ಫಿಲ್ಮಿ ಸ್ಟೈಲ್‌ನಲ್ಲಿ ಅಟ್ಯಾಕ್ ಮಾಡಿದೆ. ಶರತ್ ಅವರ ಕಾರಿಗೆ ಡಿಕ್ಕಿ ಹೊಡೆದು, ಅವರನ್ನು ಕೆಳಗಿಳಿಸಿ, ಜಂಬಿಟ್ಟಿಗೆ ಕಲ್ಲಿನಿಂದ ತಲೆಗೆ ಮತ್ತು ಭುಜಕ್ಕೆ ಜಖಂ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಕಿಡ್ನಾಪ್ ಮಾಡಲು ಯತ್ನಿಸಿ, “ನೀನು ಪೊಲೀಸ್ ದೂರು ನೀಡಿದರೆ ಎಸ್‌ಸಿ/ಎಸ್‌ಟಿ ಕೇಸ್ ಹಾಕಿ ಮುಗಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎಂಬುದು ಶರತ್ ಅವರ ಆರೋಪ.

ಕಾರ್ಯಪ್ರವೃತ್ತರಾದ ಪೊಲೀಸರು:

ಆನಂದಪುರ ಪೊಲೀಸರು ತಕ್ಷಣ ಸ್ಪಂದಿಸಿ, ಕೊಲೆ ಯತ್ನ (ಸೆಕ್ಷನ್ 307) ಅಡಿಯಲ್ಲಿ ದರ್ಶನ್ ಮತ್ತು ಸಂಗಡಿಗರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿದ್ದಾರೆ.

ದಲಿತರ ಮೇಲಿನ ‘ದೌರ್ಜನ್ಯ’ ಮತ್ತು ಪೊಲೀಸ್ ಪಿತೂರಿ?

​ಇಲ್ಲಿ ಘಟನೆಯ ಚಿತ್ರಣ ಸಂಪೂರ್ಣ ಉಲ್ಟಾ ಆಗುತ್ತದೆ. ಡಿ.ಎಸ್.ಎಸ್ (ಡಿ.ಜಿ ಸಾಗರ್ ಬಣ) ಪ್ರಕಾರ, ಅಂದು ಮಧ್ಯರಾತ್ರಿ ದಾಂಧಲೆ ನಡೆಸಿದ್ದು ದರ್ಶನ್ ಗ್ಯಾಂಗ್ ಅಲ್ಲ, ಬದಲಿಗೆ ವಕೀಲ ಶರತ್ ಮತ್ತು ಅವರ ಗೂಂಡಾಗಳು!

ಹೌದು ​ಸಂಘಟನೆಯ ಪ್ರಕಾರ, ಕುಡಿದ ಮತ್ತಿನಲ್ಲಿದ್ದ ಶರತ್, ಮೊದಲು ದರ್ಶನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ನಂತರ ದರ್ಶನ್ ಮತ್ತು ಶಿವರಾಮ್ ಕಾರಿನಲ್ಲಿ ಹೋಗುವಾಗ ಅಡ್ಡಗಟ್ಟಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಗಾಯಗೊಂಡ ಶಿವರಾಮ್ ಮತ್ತು ದರ್ಶನ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು (MLC), ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ಇವರ ದೂರನ್ನೇ ಸ್ವೀಕರಿಸಿಲ್ಲ! ಬದಲಿಗೆ, ಹಲ್ಲೆಗೊಳಗಾದವರನ್ನೇ ಜೈಲಿಗೆ ಕಳಿಸಿದ್ದಾರೆ ಎಂಬುದು ಗಂಭೀರ ಆರೋಪ.

​ಘಟನೆ ನಡೆದದ್ದು ಜನವರಿ 15/16 ರಂದು. ಆದರೆ ದಲಿತರ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು ಬರೋಬ್ಬರಿ 11 ದಿನಗಳ ನಂತರ (ಜನವರಿ 27 ರಂದು). ಅದೂ ಸಂಘಟನೆ ಪ್ರತಿಭಟನೆಗೆ ಇಳಿದ ನಂತರವೇ ಎಂಬುವುದು ಡಿಎಸ್ ಎಸ್ ಆರೋಪ

ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣದ ಹಲವಾರು ನಿಗೂಢ ಸಂಗತಿಗಳಿವೆ:
ಜನವರಿ 15ರಂದೇ ಶಿವರಾಮ್ ಮತ್ತು ದರ್ಶನ್ ಗಾಯಗೊಂಡು ಆಸ್ಪತ್ರೆ ಸೇರಿದ್ದರೂ, ಅವರ ದೂರನ್ನು ಪೊಲೀಸರು ಅಂದೇೇಕೆ ದಾಖಲಿಸಲಿಲ್ಲ? 27ನೇ ತಾರೀಖಿನವರೆಗೂ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದೇಕೆ? ಇದು ಕರ್ತವ್ಯಲೋಪವೇ ಅಥವಾ ಒತ್ತಡವೇ?

ಅಕ್ರಮ ಮರಳು ದಂಧೆಯ ಲಿಂಕ್: ವಕೀಲ ಶರತ್ ಹೇಳುವಂತೆ, ಆರೋಪಿಗಳಿಗೆ ನಿಜವಾಗಿಯೂ ಅಕ್ರಮ ಮರಳು ಸಾಗಣೆದಾರರ ನಂಟಿದೆಯೇ? ಅಥವಾ ಇದು ವೈಯಕ್ತಿಕ ದ್ವೇಷಕ್ಕೆ ‘ಸಮಾಜ ಸೇವೆ’ಯ ಮುಖವಾಡ ತೊಡಿಸಲಾಗಿದೆಯೇ?

​ಅಧಿಕಾರಿಗಳ ಅಮಾನತು ಬೇಡಿಕೆ: ಪಿ.ಎಸ್.ಐ ಪ್ರವೀಣ್ ಮತ್ತು ಅಂದಿನ ಠಾಣಾಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ಸಿಡಿದೆದ್ದಿವೆ. ಏಕಪಕ್ಷೀಯವಾಗಿ ತನಿಖೆ ನಡೆದಿದೆ ಎಂಬ ಆರೋಪದಲ್ಲಿ ಹುರುಳಿದೆಯೇ?

​ಪ್ರಸ್ತುತ ಸ್ಥಿತಿ:

​ಸದ್ಯ ಆನಂದಪುರ ಬೂದಿ ಮುಚ್ಚಿದ ಕೆಂಡದಂತಿದೆ. ಒಂದು ಕಡೆ ಯುವ ವಕೀಲನ ಮೇಲಿನ ಹಲ್ಲೆಯನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹವಿದ್ದರೆ, ಇನ್ನೊಂದು ಕಡೆ ದಲಿತರ ಮೇಲಿನ ಸುಳ್ಳು ಕೇಸ್ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಬೃಹತ್ ಪಾದಯಾತ್ರೆಯ ಎಚ್ಚರಿಕೆ ಇದೆ.

ಇದೊಂದು ಕೇವಲ ರಸ್ತೆ ಬದಿಯ ಜಗಳವಂತೂ ಅಲ್ಲ. ಇದರ ಹಿಂದೆ ಅಕ್ರಮ ದಂಧೆಯ ಕರಾಳ ಹಸ್ತವಿದೆಯೋ ಅಥವಾ ಜಾತಿ ದ್ವೇಷದ ವಿಷಬೀಜವಿದೆಯೋ ಎಂಬುದು ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಹೊರಬರಬೇಕಿದೆ. ಸತ್ಯ ಹೊರಬರುವವರೆಗೂ ಆನಂದಪುರದ ಈ ಪ್ರಕರಣ ಒಂದು ‘ಮಿಸ್ಟರಿ’ಯಾಗಿಯೇ ಉಳಿಯಲಿದೆ.

ಒಟ್ಟಾರೆಯಾಗಿ ಅತ್ಯಂತ ಉತ್ತಮ ಹಾಗೂ ನಿಷ್ಠಾವಂತ ಅಧಿಕಾರಿ ಎಂಬ ಹೆಸರನ್ನು ಪಡೆದಿರುವ ಆನಂದಪುರ ಪಿಎಸೈ ಪ್ರವೀಣ್ ಎಸ್‌ಪಿ, ಯಾವುದೇ ಒತ್ತಡಕ್ಕೂ ಮಣಿಯದ ಧೈರ್ಯಶಾಲಿ ಅಧಿಕಾರಿಯಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯ ಮತ್ತು ಸತ್ಯದ ಮೇಲೆ ಅಚಲ ನಂಬಿಕೆ ಇಟ್ಟು ಕಾರ್ಯನಿರ್ವಹಿಸುವ ಅವರು, ಕಾನೂನಿನ ಚೌಕಟ್ಟಿನೊಳಗೆ ನಿರ್ಪಕ್ಷಪಾತವಾಗಿ ತನಿಖೆ ನಡೆಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವಗಳಿಗೆ ತಲೆಬಾಗದೆ, ಪ್ರಕರಣದ ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಪರಿಶೀಲಿಸುವುದು ಅವರ ಕಾರ್ಯಶೈಲಿಯ ವಿಶೇಷತೆ. ಪ್ರಸ್ತುತ ನಡೆಯುತ್ತಿರುವ ತನಿಖೆಯ ಮೂಲಕ ಸತ್ಯಾಂಶಗಳು ಸ್ಪಷ್ಟವಾಗಿ ಹೊರಬೀಳಲಿದ್ದು, ನ್ಯಾಯ ಸಾದನೆ ಆಗಲಿದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಇದೆ.

About The Author