ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹ ಪತ್ತೆ|beach death
ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ಸಮುದ್ರಪಾಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಸಾಗರ ತಾಲೂಕಿನ ತುಮರಿ ಗ್ರಾಮದ ಪುನೀತ್ ಚೌಡಪ್ಪ(30) ಹಾಗೂ ರಾಘವೇಂದ್ರ(22) ಮೃತಪಟ್ಟವರು. ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿದ್ದ ಪುನೀತ್ ಮತ್ತು ರಾಘವೇಂದ್ರರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪುನೀತ, ರಾಘವೇಂದ್ರ ಸೇರಿದಂತೆ ಮೂವರು ಯುವಕರು ಸೋಮವಾರ ಸಂಜೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಇಳಿದ ಇಬ್ಬರು ನಾಪತ್ತೆಯಾಗಿದ್ದರು. ಇಬ್ಬರ ಮೃತದೇಹ…