ಮಿನಿ ಲಾರಿ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಚಾಲಕ ಆಸ್ಪತ್ರೆಗೆ ದಾಖಲು|accident
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪದ ಗೌರಿ ಕೆರೆ ಬಳಿ ಇವತ್ತು ಅಪಘಾತ ಸಂಭವಿಸಿದೆ. ಸಾಗರದಿಂದ ಸಿದ್ದಾಪುರದ ಕಡೆಗೆ ತೆರಳುತ್ತಿದ್ದ ಬೈಕ್ವೊಂದಕ್ಕೆ 407 ಲಾರಿ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹರಿಹರದಲ್ಲಿ ಔಷಧಿ ಸಾಗಣೆಯ ವಾಹನವೊಂದು ತೆರೆದ ಚರಂಡಿಗೆ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ಹಳೆ ಪಿ.ಬಿ.ರಸ್ತೆ ಬಳಿಯಲ್ಲಿ ಸಂಭವಿಸಿದೆ. …