ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್|gfgc

ಅಂಕದ ಜೊತೆ ಬಾಂಧವ್ಯಕ್ಕೂ ಮಹತ್ವ ಕೊಡಿ – ಜಿ ಎಸ್ ನಟೇಶ್ ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಉತ್ತಮ ಅಂಕ ಮತ್ತು ಉದ್ಯೊಗ ಗಳಿಕೆಯಷ್ಟೇ ಜೀವನ ಎಂದು ಭಾವಿಸಬಾರದು.ಸಂಬಂಧ, ಬಾಂಧವ್ಯಗಳಿಗೆ ಮಹತ್ವ ನೀಡಬೇಕು ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಆತ್ಮೀಯರಂತೆ ಇರಬೇಕಾದ ಅನಿವಾರ್ಯತೆ ಇದೆ….

Read More

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ,ಜಾನುವಾರು ರಕ್ಷಣೆ|arrested

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ,ಜಾನುವಾರು ರಕ್ಷಣೆ ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ವಶಕ್ಕೆ ಪಡೆದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಳಲೆ ವೃತ್ತದಲ್ಲಿ ಮೂಗೂಡ್ತಿ ಅರಣ್ಯ ವಲಯದ ಸಿಬ್ಬಂದಿಗಳು ತಡರಾತ್ರಿ ಗಸ್ತಿನಲ್ಲಿರುವಾಗ ಕಳಸೆ-ಬೆಳ್ಳೂರು ಮಾರ್ಗದಿಂದ ರಿಪ್ಪನ್ ಪೇಟೆಯತ್ತ ತೆರಳುತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ…

Read More

ಐತಿಹಾಸಿಕ ಚಂದ್ರಗುತ್ತಿ ದೇವಸ್ಥಾನದಲ್ಲಿನ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮೂವರ ಬಂಧನ|CHANDRAGUTTI

SORABA : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ.3ರಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಹುಂಡಿ ಒಡೆಯುವ ಪ್ರಯತ್ನವಾಗಿತ್ತು. ದೇವರ ಬೆಳ್ಳಿಯ ಮುಖವಾಡವನ್ನು ಕಳಚಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ…

Read More

ತೀರ್ಥಹಳ್ಳಿ : ಮಾಜಿ ಸೈನಿಕ ಮನ್ಸೂರ್ ಅಹಮದ್ ನಿಧನ|tth

ತೀರ್ಥಹಳ್ಳಿ : ಮಾಜಿ ಸೈನಿಕ ಮನ್ಸೂರ್ ಅಹಮದ್  (57) ಹೈ ಬಿಪಿಯಿಂದ ಪಟ್ಟಣದ ಸೊಪ್ಪುಗುಡ್ಡೆಯಲ್ಲಿನ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆಯಾದ ಮನ್ಸೂರ್ ಅಹಮದ್ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಸೊಪ್ಪುಗುಡ್ಡೆ ಬಳಿಯ ಪ್ರಾರ್ಥನಾ ಮಂದಿರದಲ್ಲಿ ಇಟ್ಟು ಪ್ರಾರ್ಥನೆ ನೆಡೆಸಲಾಗುತ್ತಿದೆ. ಮಾಜಿ ಸೈನಿಕನಾಗಿದ್ದ ಮನ್ಸೂರ್ ಅಹಮದ್ ಗೆ ಮೂವರು ಮಕ್ಕಳಿದ್ದು ಅದರಲ್ಲಿ ಮತೀನ್ ಮೊದಲ ಪುತ್ರನಾಗಿದ್ದಾನೆ. ಅಬ್ದುಲ್‌ ಮತೀನ್ ಅಹಮದ್‌ ತಾಹಾ. ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಆತನ ಪತ್ತೆಗಾಗಿ ಹೈದರಾಬಾದ್‌ನ ಎನ್‌ಐಎ ಮೂರು…

Read More

ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು|kodachadri

ಪ್ರವಾಸಿಗರ ಸ್ವರ್ಗ ಕೊಡಚಾದ್ರಿ ತಾಣಕ್ಕೆ ವಿಧಿಸಿದ್ದ ಪ್ರವೇಶ ನಿರ್ಬಂಧ ತೆರವು ಹೊಸನಗರ: ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ವಿಧಿಸಿದ ನಿರ್ಬಂಧ ವನ್ನು ಇಂದಿನಿಂದ (ಭಾನುವಾರ) ತೆರವುಗೊಳಿಸಲಾಗಿದೆ. ಕೇವಲ ವಾಹನಗಳಲ್ಲಿ ತೆರಳಲು ಮಾತ್ರ ಅವಕಾಶ ನೀಡಲಾಗಿದ್ದು, ಚಾರಣ ಮಾಡಲು ಇನ್ನೂ ಅನುಮತಿ ನೀಡಿಲ್ಲ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ. ಕೊಡಚಾದ್ರಿಗೆ ತೆರಳುವ ರಸ್ತೆ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ವಳಪಟ್ಟಿದ್ದು, ರಸ್ತೆ ಸಂಚಾರ ಮಾಡಲು ಸಾಧ್ಯವಾಗದಷ್ಟು…

Read More

ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ಮೇಲೆ ಪೊಲೀಸ್​ ದಾಳಿ.. ವಿದೇಶಿ ಮದ್ಯ, ಬಂದೂಕು, ಪ್ರಾಣಿ ಕೊಂಬಿನ ಟ್ರೋಫಿ ವಶಕ್ಕೆ|police raid

ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ಮೇಲೆ ಪೊಲೀಸ್​ ದಾಳಿ.. ವಿದೇಶಿ ಮದ್ಯ, ಬಂದೂಕು, ಪ್ರಾಣಿ ಕೊಂಬಿನ ಟ್ರೋಫಿ ವಶಕ್ಕೆ ತೀರ್ಥಹಳ್ಳಿ : ಇಲ್ಲಿನ ವಿಹಂಗಮ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ 50 ಜನ ಸಿಬ್ಬಂದಿಗಳನ್ನು ಒಳಗೊಂಡ ತಂಡ ಆ. 12 ರಂದು ರಾತ್ರಿ ವಿಹಂಗಮ ರೆಸಾರ್ಟ್ ಮೇಲೆ ದಾಳಿ ನಡೆಸಿದೆ. ಎಸ್​ಪಿ ಮಿಥುನ್​ ಕುಮಾರ್ ಹಾಗೂ ಎಎಸ್​ಪಿ ಅನಿಲ್ ಕುಮಾರ್ ಭೂಮರೆಡ್ಡಿ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿ…

Read More

ನಾಪತ್ತೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ|Sagara news

ಸಾಗರ : ಶನಿವಾರ ದೇವಸ್ಥಾನಕ್ಕೆ ಹೋಗುತ್ತೇನೆಂದು ತೆರಳಿದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಗರದ ಹೊರಭಾಗದಲ್ಲಿ ಆ.13ರ ಭಾನುವಾರ ನಡೆದಿದೆ. ಮೃತ ಯುವಕನನ್ನು ಶ್ರೀಧರ ನಗರದ ಉಮೇಶ್(24) ಎಂದು ಗುರುತಿಸಲಾಗಿದೆ. ಶನಿವಾರದಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಶ್ರೀಧರ ನಗರದಿಂದ ಶ್ರೀಗಂಧದ ಸಂಕೀರ್ಣದ ಸಮೀಪದ ಆಂಜನೇಯ ದೇವಸ್ಥಾನಕ್ಕೆ ನೀಲಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿ ತೆರಳಿದ್ದ ಉಮೇಶ್ ನಾಪತ್ತೆಯಾದ ಕುರಿತು ಗಾರೆ ಕೆಲಸದ ವೃತ್ತಿಯಲ್ಲಿರುವ ಅವನ ತಂದೆ ವಿನಾಯಕ ಎಂಬವರು ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು….

Read More

ರಿಪ್ಪನ್‌ಪೇಟೆ : ವಿನಾಯಕನಗರದ ಶಾರದಾ ಬಾಳಿಗ ನಿಧನ|RIP

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರ ನಿವಾಸಿ ಶಾರದಾ ಬಾಳಿಗ (80) ವಯೋಸಹಜ ನಿಧನರಾಗಿದ್ದಾರೆ. ಪಟ್ಟಣದ ವಿನಾಯಕ ನಗರ ನಿವಾಸಿಯಾಗಿದ್ದ ಇವರು ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ವಿನಾಯಕನಗರದಲ್ಲಿ ಕಿರಾಣಿ ಅಂಗಡಿ ನಡೆಸುತಿದ್ದ ಇವರು ಪಟ್ಟಣದಾದ್ಯಂತ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಾಳಿಗ ಪ್ರಿಂಟರ್ ನ ರಾಜಾರಾಮ್ ಬಾಳಿಗ ಮತ್ತು ಬಾಳಿಗ ಕಮ್ಯೂನಿಕೇಷನ್ ನ ಗೋಪಾಲಕೃಷ್ಣ ಬಾಳಿಗ ಸೇರಿದಂತೆ ನಾಲ್ಕು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಜರುಗಿದೆ.

Read More

ರಿಪ್ಪನ್‌ಪೇಟೆ – ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ|SSF

ರಿಪ್ಪನ್‌ಪೇಟೆ – ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ  ರಿಪ್ಪನ್‌ಪೇಟೆ : ಪಟ್ಟಣದ ಎಸ್ ಎಸ್ ಎಫ಼್ ಸಂಘಟನೆ ವತಿಯಿಂದ ತಅಝೀಜುಲ್ ಅರಬ್ಬಿಕ್ ಮದರಸ ವಿದ್ಯಾರ್ಥಿಗಳಿಂದ ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಪಟ್ಟಣದ ನಾಲ್ಕು‌ ಪ್ರಮುಖ ರಸ್ತೆಗಳಲ್ಲಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ವಿನಾಯಕ ವೃತ್ತದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ SSF ಸಂಘಟನೆಯಿಂದ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ರ‍್ಯಾಲಿಯನ್ನು ಆಯೋಜಿಸಲಾಗಿದೆ. SSF ಸಂಘಟನೆಯು…

Read More

2 ಕೆಜಿ ಗಾಂಜಾ ಸಹಿತ ಆರೋಪಿಗಳು ಅರೆಸ್ಟ್! ಗಡಿಪಾರಾದ ರೌಡಿಶೀಟರ್ ನಿಂದ ಆಂಧ್ರದ ಗಾಂಜಾ ಜಿಲ್ಲಾದ್ಯಂತ ಸಪ್ಲೈ..!!???

ಶಿವಮೊಗ್ಗ ಪೊಲೀಸರು ಗಾಂಜಾ ವಿಚಾರದಲ್ಲಿ ಇವತ್ತು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಸಿಟಿ ಲಿಮಿಟ್​ನಲ್ಲಿಯೇ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನ ಬಂಧಿಸಿ ಬರೋಬ್ಬರಿ 2 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ಧಾರೆ.  ಶಿವಮೊಗ್ಗ ನಗರದ ಎಂ.ಆರ್.ಎಸ್. ನಿಂದ  ವಡ್ಡಿನಕೊಪ್ಪದ ಕಡೆಗೆ ಹೋಗುವ ರಸ್ತೆಯ  ಸಮೀಪ ಇರುವ ಕೆಇಬಿ ಖಾಲಿ ಜಾಗದಲ್ಲಿ ಕೆಲವರು ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ  ಡಿ.ಸಿ.ಆರ್.ಬಿ ಪೊಲೀಸ್ ಉಪಾಧೀಕ್ಷಕ  ಪ್ರಭು ಡಿ.ಟಿ ನೇತ್ರತ್ವದಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆ ದೀಪಕ್, ಎಂ.ಎಸ್ ಟೀಂ …

Read More