ಶಿವಮೊಗ್ಗದ ಬಿಕ್ಕೊನಹಳ್ಳಿಯಲ್ಲಿ ನರಬಲಿ ಪಡೆದಿದ್ದ ಚಿರತೆ ಸೆರೆ|leopard
ಶಿವಮೊಗ್ಗದ ಬಿಕ್ಕೊನಹಳ್ಳಿಯಲ್ಲಿ ನರಬಲಿ ಪಡೆದಿದ್ದ ಚಿರತೆ ಸೆರೆ ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಹಿಳೆಯೊಬ್ಬರ ಮೇಲೆ ಎರಗಿ ಕೊಂದು ಹಾಕಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಬೇಟೆಯಾಡಲು ಅಂದಿನಿಂದಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಬನ್ನಿಕೆರೆಯ ಹೊಲದಲ್ಲಿ ಕಳೆ ಕೀಳಲು ತೆರಳಿದ್ದ ಯುವಕನೋರ್ವನಿಗೆ ಚಿರತೆ ಕಾಣಿಸಿಕೊಂಡಿತ್ತು. ಆ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಕಳೆದ ರಾತ್ರಿ ಚಿರತೆ…