ಮೇ 13 ರಿಂದ ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ ಉರೂಸ್ ಸಮಾರಂಭ :
ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ 2022-23 ರ ಉರೂಸ್ ಸಮಾರಂಭದ ದಿನಾಂಕ ನಿಗದಿಯಾಗಿದೆ. ಇಂದು ದರ್ಗಾ ಸಮಿತಿ ಅಧ್ಯಕ್ಷರಾದ ಜೆ ಮಹಮ್ಮದ್ ಸಾಬ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಮೇ 13,14,15,16 ರ ನಾಲ್ಕು ದಿನ ಉರೂಸ್ ಕಾರ್ಯಕ್ರಮ ನಡೆಸಲು, ಉರೂಸ್ ಸಮಾರಂಭಕ್ಕೆ ಮಂತ್ರಿಗಳು ಹಾಗೂ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಉರೂಸ್ ಸಮಾರಂಭವನ್ನು ಸರ್ಕಾರ ಸುತ್ತೋಲೆಯಂತೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ವಿನಾಯಕ ಉಡುಪ…