Headlines

SSLC ಪಲಿತಾಂಶ : ರಿಪ್ಪನ್‌ಪೇಟೆಗೆ ಕೀರ್ತಿ ತಂದ ಪ್ರತಿಭಾನ್ವಿತರು

ರಿಪ್ಪನ್‍ಪೇಟೆ: ಎಸ್ ಎಸ್ ಎಲ್ ಸಿ ಪಲಿತಾಂಶದಲ್ಲಿ ರಿಪ್ಪನ್‌ಪೇಟೆಯ 55 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೇರಿಮಾತ  ಮತ್ತು ರಾಮಕೃಷ್ಣ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆ ರಿಪ್ಪನ್‌ಪೇಟೆ: ಶೇ. 64.42 ಫಲಿತಾಂಶ ಬಂದಿದ್ದು, ಉನ್ನತ ಶ್ರೇಣಿ 22, ಪ್ರಥಮ 56, ದ್ವಿತೀಯ 21,  ಉತ್ತೀರ್ಣ 6 ವಿದ್ಯಾರ್ಥಿಗಳು,   ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ:  ಶೇ 88…

Read More

ಶಿವಮೊಗ್ಗದ ರಾಜಾಕಾಲುವೆಯಲ್ಲಿ ತೇಲಿ ಬಂತು ನವಜಾತ ಶಿಶುವಿನ ಮೃತದೇಹ :

ಶಿವಮೊಗ್ಗ ನಗರದಲ್ಲಿ ನಿನ್ನೆಯ ದಿನ ಸುರಿದ ಭಾರೀ ಮಳೆ ಸುರಿದಿತ್ತು.ಇಂದು ಆರ್ ಎಂಎಲ್ ನಗರದ ರಾಜಕಾಲುವೆಯಲ್ಲಿ ಒಂದು ನವಜಾತ ಶಿಶುವೊಂದರ ಮೃತದೇಹ ತೇಲಿಬಂದ ಘಟನೆ ನಡೆದಿದೆ. ಸ್ಥಳೀಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಎಸ್​ಡಿಪಿಐ ಪಕ್ಷದ ಕಾರ್ಯಕರ್ತರು ಕಸದ ರಾಶಿ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸುಮಾರು ಒಂದು ತಿಂಗಳ ನವಜಾತ ಶಿಶು ಇದಾಗಿದೆ. ನೆನ್ನೆಯ ದಿನ ಮಗುವೊಂದು ತೇಲಿ ಹೋಗಿರುವ ಬಗ್ಗೆ ಆರ್ ಎಂಎಲ್ ನಗರದ ಮಹಿಳೆಯೊಬ್ಬರು ಎಸ್ ಡಿಪಿಐ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಆ ಹಿನ್ನಲೆಯಲ್ಲಿ …

Read More

ಬೆಂಗಳೂರಿನಲ್ಲಿ ಪಾದಾಚಾರಿಗಳ ಮೇಲೆ ಹರಿದ ಕಾರು : ರಿಪ್ಪನ್‌ಪೇಟೆ ಮೂಲದ ಯುವಕ ಸಾವು

ಪಾದಾಚಾರಿಗಳ ಮೇಲೆ ಕಾರು ಹರಿದು ಹೋಗಿ ರಿಪ್ಪನ್‌ಪೇಟೆ ಮೂಲದ ವ್ಯಕ್ತಿಯೊಬ್ಬ ದುರ್ಮರಣ ಹೊಂದಿದ ಘಟನೆ ಬೆಂಗಳೂರು ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ.  ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿದೆ. ಕೂಡಲೇ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಸುರೇಶ್ ಯಾನೆ ರುದ್ರಪ್ಪ (28) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಚಿನ್, ಸಿವರಾಜು, ಶೈಲೇಂದ್ರ ಅವರಿಗೆ…

Read More

ನೇಣು ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ರಿಪ್ಪನ್‌ಪೇಟೆಯ ಯುವಕ ಸಚಿನ್ :

ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಬಿಗಿದುಕೊಂಡಿರುವ ಘಟನೆ ರಿಪ್ಪನ್‌ಪೇಟೆಯ ನೆಹರು ಬಡಾವಣೆಯಲ್ಲಿ ನಡೆದಿದೆ. ರಿಪ್ಪನ್ ಪೇಟೆ ಗವಟೂರು ಗ್ರಾಮದ ನೆಹರು ಬಡಾವಣೆಯ ನಿವಾಸಿ  ದಿ|| ಶ್ರೀನಿವಾಸ್ ರವರ ಪುತ್ರ ಯುವಕ ಸಚಿನ್(25) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಾತ್ರಿ ಮನೆಯಲ್ಲಿ ತಾಯಿಯೊಂದಿಗೆ ಊಟ ಮುಗಿಸಿಕೊಂಡು ಪಕ್ಕದ ರೂಮಿನಲ್ಲಿ ಮಲಗಿದ್ದ ಸಚಿನ್ ಬೆಳಿಗ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನ ಮರಣೋತ್ತರ ಪರೀಕ್ಷೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ…

Read More

ಭಾರಿ ಮಳೆಗೆ ತೀರ್ಥಹಳ್ಳಿಯಲ್ಲಿ ಗದ್ದೆಗೆ ಹೋಗಿದ್ದ ವ್ಯಕ್ತಿ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟಕ್ಕೆ ತೀರ್ಥಹಳ್ಳಿಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಮೃತಪಟ್ಟ ದುರ್ದೈವಿಯನ್ನು ತೂದೂರು ಗ್ರಾಮದ ಶಂಕರ್ ಬಿನ್ ಲಿಂಗ ನಾಯ್ಕ ಎಂದು ಗುರುತಿಸಲಾಗಿದೆ  ತೀರ್ಥಹಳ್ಳಿಯ ಮೇಲಿನ ತೂದೂರು ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಶಂಕರ್ ಬಿನ್ ಲಿಂಗಾನಾಯ್ಕ್ ಗದ್ದೆಯ ಹೊಂಡದಲ್ಲಿ ಬಿದ್ದು, ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನ ರಾತ್ರಿ ಗದ್ದೆಗೆ ತೆರಳಿದ್ದ ವೇಳೆ, ಕಾಲು ಜಾರಿ ಹೊಂಡಕ್ಕೆ  ಶಂಕರ್ ಬಿದ್ದಿದ್ದರು. ಶಂಕರ್ ಬೆಳಿಗ್ಗೆ ಬರದಿದ್ದನ್ನು ಮನೆಯವರು ಗಮನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ತೀರ್ಥಹಳ್ಳಿ…

Read More

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ : ಯಡೂರು ರಾಜಾರಾಂ

ರಾಜ್ಯದಲ್ಲಿ ಜೆಡಿಎಸ್ ಬಲಿಷ್ಟವಾಗಿದೆ, ಹೆಚ್.ಡಿ.ಕುಮಾರ ಸ್ವಾಮಿ ಯವರ ಆಡಳಿತವನ್ನು ರಾಜ್ಯದ ಜನತೆ ಸ್ಮರಿಸುತ್ತಿದ್ದಾರೆ, 2023ರಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ, ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರ್‌ಸ್ವಾಮಿಯವರು ಮತ್ತೆ ಸಿ ಎಂ ಆಗುತ್ತಾರೆ.ಗ್ರಾಮೀಣ ಬಾಗದಲ್ಲಿ ಜೆಡಿಎಸ್ ಬಲಿಷ್ಟ ಎಂದು ವಾಗಿ ಸಂಘಟನೆ ಯಾಗುತ್ತಿದೆ  ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಹೇಳಿದರು. ಹೊಸನಗರ ತಾಲ್ಲೂಕಿನ ಜೆಡಿಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಿಪ್ಪನ್ ಪೇಟೆಯ ಎನ್ ವರ್ತೇಶ್ ಹಾಗೂ ಜೆಡಿಎಸ್ ಹಿರಿಯ…

Read More

ಎಸ್ ಎಸ್ ಎಲ್ ಸಿ ಪಲಿತಾಂಶ : 625 ಕ್ಕೆ 625 ಪಡೆದ 11 ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರದ್ದೇ ಮೇಲುಗೈ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ಮೂಲಕ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.84.60 ಫಲಿತಾಂಶ ದೊರೆತಿದ್ದು ಎ ಗ್ರೇಡ್ ಸ್ಥಾನ ದೊರೆತಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 23136 ಜನ‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19574 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.  ಜಿಲ್ಲೆಯ 7 ತಾಲೂಕಿನ ಫಲಿತಾಂಶ ಇಂತಿದೆ: ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ 1654 ವಿದ್ಯಾರ್ಥಿಗಳಲ್ಲಿ 1516 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ.91.66 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ತೀರ್ಥಹಳ್ಳಿ ಅತಿ ಹೆಚ್ಚು ಅಂಕಪಡೆದ ತಾಲೂಕಾಗಿದೆ. ಹೊಸನಗರ…

Read More

ಕಾರ್ ಚಾಲಕನ ಎಡವಟ್ಟು, ಚರಂಡಿಗೆ ಇಳಿದ ಖಾಸಗಿ ಬಸ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ರಿಪ್ಪನ್ ಪೇಟೆ  : ಕಾರ್ ಚಾಲಕನ ಎಡವಟ್ಟಿನಿಂದ ಸಂಭವಿಸಲಿದ್ದ ಭಾರಿ ಅಪಘಾತವೊಂದು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಗುರುವಾರದ  ಸೂಡೂರು  ನಡೆದಿದೆ. ಎದುರಿನಿಂದ ಬಂದ ಕಾರು ಚಾಲಕನೋರ್ವ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ, ಅಪಘಾತವನ್ನು ತಪ್ಪಿಸಲು ಖಾಸಗಿ ಬಸ್ಸನ್ನು ರಸ್ತೆ ಬದಿಗೆ…

Read More

ಚಲಿಸುತ್ತಿದ್ದ ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಬೈಕ್ ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ :

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಹೊರವಲಯದ ಉಳವಿ ರಸ್ತೆಯ ಪಡವಗೊಡು ಬಳಿ“ರಾಯಲ್ ಎನ್ಫಿಲ್ಡ್ ಬುಲ್ಲೆಟ್” ಬೈಕೊಂದು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ತಕ್ಷಣ ಸ್ಥಳೀಯರು ವಾಹನಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ  ಸಹಕರಿಸಿದ್ದಾರೆ. ಎಂದು ತಿಳಿದು ಬಂದಿದೆ.  ಬೆಂಕಿ ಹೊತ್ತಿಕೊಂಡ ಬೈಕ್ ದಾವಣಗೆರೆ ನೊಂದಾಣಿಯ “KA 17 HQ 3482” ದಾವಣಗೆರೆ ಮೂಲದವರು ಎಂದು ಬಲ್ಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ :

ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ಮೇ.19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಆದೇಶಿಸಿದ್ದಾರೆ.

Read More