w
Headlines
Home » ರಿಪ್ಪನ್ ಪೇಟೆಯ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕೊರೊನಾ ಸೋಂಕು ನಿವಾರಣೆಗಾಗಿ ಶ್ರೀ ಸತ್ಯನಾರಾಯಣ ಪೂಜೆ.

ರಿಪ್ಪನ್ ಪೇಟೆಯ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕೊರೊನಾ ಸೋಂಕು ನಿವಾರಣೆಗಾಗಿ ಶ್ರೀ ಸತ್ಯನಾರಾಯಣ ಪೂಜೆ.

ರಿಪ್ಪನ್ ಪೇಟೆ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ನಿವಾರಣೆಯಾಗಿ ದೇಶದ ಜನತೆ ಉತ್ತಮ ಆರೋಗ್ಯವನ್ನು ಹೊಂದಲಿ ಎಂದು ಪಟ್ಟಣದ ಕಾಲಭೈರವೇಶ್ವರ  ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು  ಸರಳವಾಗಿ ಆಚರಿಸಲಾಯಿತು.


 ಈ ಸಂದರ್ಭದಲ್ಲಿ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷ ಅಧ್ಯಕ್ಷೆ ವಾಣಿ ಗೋವಿಂದಪ್ಪ ಗೌಡ ಮಾಧ್ಯಮದವರೊಂದಿಗೆ ಮಾತನಾಡಿ ಕೋವಿಡ್ 19 ರ ಕಾರಣದಿಂದ ದೇಶದಲ್ಲಿ ಕೋಟ್ಯಂತರ ಜನರು ಸೋಂಕಿನಿಂದ ಬಳಲುವಂತಾ ಯಿತು. ಹಾಗೆಯೇ ಲಕ್ಷಾಂತರ ಜನರು ಮರಣವನ್ನು ಹೊಂದಿದರು. ಕೊರೊನಾ ಸೋಂಕು ದೇಶದಲ್ಲಿ ಒಂದನೆಯ ಎರಡನೆಯ ಹಾಗೂ ಮೂರನೆಯ ಅಲೆಯ ರೀತಿಯಲ್ಲಿ ಬಂದು ಇಡೀ ಪ್ರಪಂಚದ ಹಾಗೂ ದೇಶದ ಜನತೆ ಸಂಕಷ್ಟದಲ್ಲಿ ಬಳಲುವಂತಾಯಿತು. ದೇಶದಲ್ಲಿ ಉಂಟಾದ  ಸಂಕಷ್ಟವು ಪರಿಹಾರವಾಗಿ ಎಲ್ಲ ಜನರು ಉತ್ತಮ ಆರೋಗ್ಯವನ್ನು ಹೊಂದಲಿ ಎಂಬ ಸದುದ್ದೇಶದಿಂದ ಈ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು ಎಂದ ಅವರು ಮುಂದಿನ ದಿನಗಳಲ್ಲಿ ದೇಶದಲ್ಲಿ ಯಾವುದೇ ರೀತಿಯ ಮಹಾಮಾರಿ ರೋಗ ಮತ್ತು ಸೋಂಕು ಹರಡದೆ ದೇಶದ ಹಾಗೂ ನಾಡಿನ ಎಲ್ಲ ಜನರ ಆರೋಗ್ಯವನ್ನು ಶ್ರೀ ಸತ್ಯನಾರಾಯಣ ಕಾಪಾಡಲಿ ಎಂದು ಹೇಳಿದರು.
 ಆರ್ಚಕ ರವಿ ಭಟ್ಟರವರ ನೇತೃತ್ವದಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ. ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ವೀಣಾ ಗುರುಮೂರ್ತಿ  ಪದಾಧಿಕಾರಿಗಳಾದ ಪ್ರಮೀಳಾ ಎಲ್ ಗೌಡ. ಸುಮಂಗಲಾ ಹರೀಶ್. ರೂಪ ಶಂಕ್ರಪ್ಪ. ಕೋಮಲ ಕೇಶವ. ಪ್ರವೀಣಿ ಮಂಜುನಾಥ್. ಜಯಂತಿ ಅಶೋಕ್. ಶ್ಯಾಮಲಾ. ಮಮತಾ  ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.