Headlines

ಅನಾರೋಗ್ಯ ಹಿನ್ನಲೆ : SSLC ವಿದ್ಯಾರ್ಥಿನಿ ಆತ್ಮಹತ್ಯೆ

ಹೊಸನಗರ ಪಟ್ಟಣದ ಮಾರಿಗುಡ್ಡದಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ತಾಲೂಕಿನ ಅರೋಡಿ ಕೊಡಸೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ರವರ ಪುತ್ರಿ ಶಮಾ ಎಲ್ ಬಂಡಿ (15) ತನ್ನ ತಾಯಿಯನ್ನು ಮಾರ್ನಿಂಗ್ ಕ್ಲಾಸ್ ಡ್ಯೂಟಿಗೆ ಕಳುಹಿಸಿ ಮನೆಗೆ ಬಂದು ನೇಣಿಗೆ ಶರಣಾದ ದುರಂತ ಘಟನೆ ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.


ಶಮಾ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು ಕಳೆದ ಕೆಲ ಸಮಯದಿಂದ ಆಕೆ ಅನಾರೋಗ್ಯ ಪೀಡಿತಳಾಗಿದ್ದಳು ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿನಿಯ ತಂದೆ ನಿವೃತ್ತ ಸೈನಿಕರಾಗಿದ್ದು ಪ್ರಸ್ತುತ ಅಮೃತ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದಾರೆ.

 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿ ಮುಂದಿನ ಕ್ರಮ‌ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *