ಹೊಸಮನೆ ಪೊಲೀಸ್ ಠಾಣೆಯ ಪೇದೆಯ ವಿರುದ್ದ ಮಹಿಳೆಯಿಂದ ದೂರು ದಾಖಲು :
ಹೊಸಮನೆ ಪೊಲೀಸ್ ಠಾಣೆಯ ಪೇದೆಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್ ದಾಖಲಿಸಿದ್ದಾರೆ. ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಬ್ದುಲ್…