ಕೈಬಿಟ್ಟು ಕಮಲ ಹಿಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿರುದ್ಧ ಕಾಂಗ್ರೆಸ್ಸಿಗರ ಆಕ್ರೋಶ :
ರಿಪ್ಪನ್ ಪೇಟೆ : ಅಪರೇಶನ್ ಕಮಲಕ್ಕೆ ತುತ್ತಾಗಿರುವ ಮಹಾಲಕ್ಷ್ಮಿ ಅಣ್ಣಪ್ಪ ರವರು ನೈತಿಕ ಹೊಣೆ ಹೊತ್ತು ರಿಪ್ಪನ್ ಪೇಟೆ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್ ಹಾಗೂ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಜಂಟಿ ಪತ್ರೀಕಾ ಗೋಷ್ಟಿಯಲ್ಲಿ ಆಗ್ರಹಿಸಿದರು. ಪಟ್ಟಣದ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷಕ್ಕೂ ನಿಷ್ಟೆ ತೋರದ ಮಹಾಲಕ್ಷ್ಮಿ ಅಣ್ಣಪ್ಪರವರು ನಿನ್ನೆ ದಿನ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.ಕಾಂಗ್ರೆಸ್ ಗ್ರಾಪಂ…