ಕರ್ತವ್ಯದ ನಡುವೆಯೂ ಮಾನವೀಯತೆ ಮೆರೆದ ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನಾಯ್ಕ್…
ಸಾಗರ: ಇಂದು ಬೆಳಗ್ಗೆ ಸಾಗರ ಹೊರವಲಯದ ಗ್ರಾಮಾಂತರ ವ್ಯಾಪ್ತಿಯ ಜೋಗ ರಸ್ತೆಯ ಕಾನ್ಲೆ ತಿರುವಿನ ಬಳಿ ಸಾಗರದಿಂದ ಜೋಗ ಕಡೆಗೆ ಯುವಕ ಯುವತಿ ಒಂದೇ ಹೋಗುತ್ತಿದ್ದ ಒಂದೇ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಎದುರಿನಿಂದ ಹೋಗುತ್ತಿದ್ದ ಬಸ್ಸನ್ನು ಹಿಂದಿಕ್ಕಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರ್ ಗೆ ತಗುಲಿ ಯುವಕನಿಗೆ ಅಲ್ಪ ಸ್ವಲ್ಪ ಹಾಗೂ ಯುವತಿಗೆ ಗಂಭೀರ ಸ್ವರೂಪದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಈ ಸಂದರ್ಭದಲ್ಲಿ ಕರ್ತವ್ಯಕ್ಕೆಂದು ಅದೇ ದಾರಿಯಲ್ಲಿ ಹೋಗುತ್ತಿದ್ದ ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನಾಯ್ಕ್ ಅಲ್ಲಿ ನೆರೆದಿದ್ದ ಐವತ್ತಕ್ಕೂ ಹೆಚ್ಚು ಜನರ ಗುಂಪನ್ನು ಕಂಡು ತನ್ನ ಕಾರ್ ನಿಲ್ಲಿಸಿ ನೋಡುವಾಗ ಬೈಕ್ ಅಪಘಾತ ನಡೆದಿದ್ದು ಕಂಡು ಬಂದಿದೆ. ಸಹಾಯಕ್ಕೆ ಅಲ್ಲಿದ್ದ ಜನರನ್ನು ಕರೆದರೆ ಯಾರು ಕೂಡ ಮುಂದೆ ಬರಲಿಲ್ಲ.. ಅಂಬುಲೆನ್ಸ್ ಗೆ ಕರೆಮಾಡಿದಾಗ ಅದು ಕೂಡ ಸಂಪರ್ಕಕ್ಕೆ ಬರಲಿಲ್ಲ.. ತಕ್ಷಣ ತಾನು ಹೋಗುತ್ತಿದ್ದ ಖಾಸಗಿ ಕಾರ್ ನಲ್ಲಿ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ. ಅಲ್ಲೇ ಇದ್ದು ಚಿಕಿತ್ಸೆ ಕೊಡಿಸಿ ಅಪಘಾತಕ್ಕೀಡಾದ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿ.ಮಾನವೀಯತೆ ಮೆರೆಯುವಲ್ಲಿ ಸಾಕ್ಷಿಯಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ PSI ತಿರುಮಲೇಶ್ ನಾಯ್ಕ್ ರವರ ಸಮಯಪ್ರೆಜ್ಞೆ ಗೆ ಹಾಗೂ ಮಾನವೀಯತೆಯನ್ನು ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೆ ತಿರುಮಲೇಶ್ ರವರ ಕಾರ್ಯಕ್ಕೆ ಸಾಗರ ಡಿವೈಎಸ್ಪಿ ರೋಹನ್ ಜಗದೀಶ್ IPS ರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಸಾರ್ವಜನಿಕರೆ….. ಅಪಘಾತವಾದ ಸಂದರ್ಭದಲ್ಲಿ ಫೋಟೋ ಫೋನು ಮಾಡುವ ಬದಲು ತಕ್ಷಣ ನೆರವಿಗೆ ಸ್ಪಂದಿಸಿ ಎನ್ನುವುದು ನಮ್ಮ ಕಳ ಕಳಿ. ಹಾಗೆ ಸಮಯಕ್ಕೆ ಸರಿಯಾಗಿ ನೆರವಿಗೆ ಬಂದ PSI ತಿರುಮಲೇಶ್ ನಾಯ್ಕ್ ರವರನ್ನು ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ಹೃದಯ ಪೂರ್ವಕವಾಗಿ ಅಭಿನಂದಿಸುತ್ತದೆ..
ಮಾಹಿತಿ ಕೃಪೆ : @ಮಲೆನಾಡ ರಹಸ್ಯ…!


