w
Headlines
Home » ಹೊಸನಗರ ಪೊಲೀಸರ ಭರ್ಜರಿ ಭೇಟೆ : ಮೀನು ಗಾಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ :

ಹೊಸನಗರ ಪೊಲೀಸರ ಭರ್ಜರಿ ಭೇಟೆ : ಮೀನು ಗಾಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ :

ಹೊಸನಗರ: ಇಲ್ಲಿನ ಸಮೀಪದ ಮಾವಿನಕೊಪ್ಪ ಬಳಿ ಇಂದು ಬೆಳಗಿನ ಜಾವ ಮೀನು ತುಂಬಿದ್ದ ಗೂಡ್ಸ್ ಗಾಡಿಯಲ್ಲಿ ಸುಮಾರು ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.


 ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ನಾಯ್ಕ್ ರವರ ನೇತೃತ್ವದ ತಂಡ ಇಂದು ಬೆಳಗಿನಜಾವ ಮಿಂಚಿನ ದಾಳಿ ನಡೆಸಿ ಒಂದು ಕೆ.ಜಿ ಗಾಂಜಾ ಹಾಗೂ ಆರೋಪಿ ಸಹಿತ ಒಂದು ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಡಿ.ವೈ.ಎಸ್.ಪಿಯವರ ಆದೇಶದ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂಧನ್‌ರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿದ್ದು ಬಟ್ಟೆಮಲ್ಲಪ್ಪದಿಂದ ಬರುತ್ತಿದ್ದ ಮೀನು ತುಂಬಿದ್ದ ಗೂಡ್ಸ್ ಆಟೋದಲ್ಲಿ ಒಂದು ಕೆ.ಜಿ ಗಾಂಜಾವನ್ನು ಫಾಯಜ್ ಬಿನ್ ಕರಿಸಾಬ್ ಎಂಬುವವರು ತುಂಬಿಕೊಂಡು ಹೊಸನಗರದ ಕಡೆ ಬರುತ್ತಿದ್ದಾಗ ದಾಳಿ ನಡೆಸಿ ಗೂಡ್ಸ್ ಆಟೋ ಮತ್ತು ಫಯಜ್‌ ಎಂಬುವವನನ್ನು ವಶಪಡಿಸಿಕೊಂಡಿದ್ದಾರೆ.

ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.