w
Headlines
Home » ಭದ್ರಾವತಿ : ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸುಮಾರು 20 ಕೆ ಜಿ ಗಾಂಜಾ ವಶ

ಭದ್ರಾವತಿ : ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸುಮಾರು 20 ಕೆ ಜಿ ಗಾಂಜಾ ವಶ

ಭದ್ರಾವತಿ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ ಚೆಕ್ ಪೋಸ್ಟ್ ನಲ್ಲಿ  ಭದ್ರಾವತಿ ಕಡೆಯಿಂದ ಬಂದ ಬುಲೆರೋ ಪಿಕಪ್ ವಾಹನ ಸಂಖ್ಯೆKA14C2174 ಗಾಡಿಯಲ್ಲಿ 20ಕೆಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ.


 ಗೊಂದಿ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿರುವಾಗ ಭದ್ರಾವತಿ ಕಡೆಯಿಂದ ಬಂದ ಬೊಲೇರೊ ಪಿಕಪ್ ನಿಲ್ಲಿಸಲು ಸೂಚಿಸಿದರು ನಿಲ್ಲಿಸಿದೆ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಸಿ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆರೋಪಿಗಳನ್ನು ವಿಚಾರಿಸಿದಾಗ ಸದರಿ ವಾಹನದಲ್ಲಿ ಆಂಧ್ರಪ್ರದೇಶದ ತುಣಿ ಎಂಬ ಊರಿನ ಹತ್ತಿರದ ಹಳ್ಳಿಯಿಂದ ಮಾದಕವಸ್ತು ಗಾಂಜಾವನ್ನು ಮಾರಾಟಮಾಡುವ ಉದ್ದೇಶದಿಂದ ತರುತ್ತಿರುವುದಾಗಿ ತಿಳಿದು ಬಂದಿರುತ್ತದೆ.
ನಂತರ  ವಾಹನವನ್ನು ತಪಾಸಣೆ ಮಾಡಿದಾಗ ಗಾಂಜಾ ಇರುವುದು ಕಂಡುಬಂದಿದ್ದು ಎರಡು ಜನ ಆರೋಪಿಗಳನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 3,00,000 ರೂ ಗಳ 20 ಕೆಜಿ ಒಣ ಗಾಂಜಾ, ಮೊಬೈಲ್ ಫೋನ್ & ಕೃತ್ಯಕ್ಕೆ ಬಳಸಿದ ಬುಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡು ಗುನ್ನೆ ಸಂಖ್ಯೆ:209/2021 ಕಲಂ 353 ಐಪಿಸಿ &8(C),20(B)(ii)(C)NDPS ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.