w
Headlines
Home » ಶಿವಮೊಗ್ಗ: ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್’ಗಳಿಂದ ರಾತ್ರೋರಾತ್ರಿ ಡಿಸೇಲ್ ಕಳ್ಳತನ!

ಶಿವಮೊಗ್ಗ: ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್’ಗಳಿಂದ ರಾತ್ರೋರಾತ್ರಿ ಡಿಸೇಲ್ ಕಳ್ಳತನ!

ಶಿವಮೊಗ್ಗ: ನಗರದ ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್ ನಿಂದ ಡೀಸೆಲ್ ಕಳುವಾಗಿದೆ. ಶಿವಮೊಗ್ಗ ನಗರದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿಲ್ಲಿಸಿದ್ದ ಬಸ್ಗಳಿಂದ ಡೀಸೆಲ್ ಕದಿಯಲಾಗಿದ್ದು, ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ಗಳಿಂದ ತಡರಾತ್ರಿ ವೇಳೆ ಡೀಸೆಲ್ ಕದಿಯಲಾಗಿದೆ.

ಡೀಸೆಲ್ ಮತ್ತು ಪೆಟ್ರೋಲ್ ದರ ದಿನ ನಿತ್ಯ ಏರುತ್ತಿರುವುದರಿಂದ ಡಿಸೇಲ್ ಕಳ್ಳರ ಟಾರ್ಗೆಟ್ ಆಗಿದೆ.ನಾಲ್ಕು ಬಸ್ ಗಳನ್ನೂ ಶಿಕ್ಷಣ ಸಂಸ್ಥೆ ಬಳಿ ಸೆಕ್ಯೂರಿಟಿ ನಡುವೆಯೇ ನಿಲ್ಲಿಸಲಾಗಿದ್ದರೂ ಕಳ್ಳರು ಕೈಚಳಕ ತೋರಿಸಿದ್ದಾರೆ. ತಡರಾತ್ರಿ ವೇಳೆ ಕೃತ್ಯ ನಡೆದಿದೆ ಎನ್ನಲಾಗಿದ್ದು ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ ಗಳಿಂದ ಸುಮಾರು 550 ಲೀಟರ್ ಡೀಸೆಲ್ ದೋಚಲಾಗಿದೆ. ಈ ಬಸ್ ಗಳು ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿವೆ. 

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.