ಹೊಸನಗರ : ಯಡೂರು ಸುಳುಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ಡಾಕ್ಟರ್ ಇಲ್ಲ ನಮಗೆ ಡಾಕ್ಟರ್ ಬೇಕು ಎಂದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿ ಸದ್ಯ ಆರ್ಯುವೇದ ಬಗ್ಗೆ ತಿಳಿದಿರುವ ಡಾಕ್ಟರ್ ಇದ್ದು ನಮಗೆ ಇಂಗ್ಲಿಷ್ ಮೆಡಿಸನ್ ಕೋಡುವ ಡಾಕ್ಟರ್ ಬೇಕು. ತೀರ್ಥಹಳ್ಳಿ ಅಥವಾ ಹೊಸನಗರಕ್ಕೆ ಆರೋಗ್ಯ ಸರಿ ಇಲ್ಲ ಎಂದು ಹೋಗುವುದಾದರೆ 30 ಕ್ಕು ಹೆಚ್ಚು ಕಿಲೋಮೀಟರ್ ಅಗುತ್ತದೆ.
ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಯಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದ 24 ಗಂಟೆ ಇಲ್ಲೇ ಇದ್ದು ಸೇವೆ ಸಲ್ಲಿಸುವ ಡಾಕ್ಟರ್ ಬೇಕು ಏಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನವರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವದಲ್ಲಿ ಸುಳಗೋಡು ಗ್ರಾ ಪ ಅಧ್ಯಕ್ಷ ಸದಾನಂದ ಯಡೂರು ಗ್ರಾಮಪಂಚಾಯತ್ ಅಧ್ಯಕ್ಷರು ಕಲಾವತಿ ಚದ್ರಪ್ಪ ಮಾಸ್ತಿಕಟ್ಟೆ ವಿದ್ಯಾನಂದರಾವ್ ರೈತ ಸಂಘದ ಕಂಪದ ಕೈ ರವಿಂದ್ರ,ಗ್ರಾಮ ಪಂಚಾಯತಿ ಸದಸ್ಯರುಗಳಾದ ಸದಸ್ಯರಾದ ಇಸ್ಮಾಯಿಲ್ ಯಶೋಧ ಚಂದ್ರಶೇಖರ ಉಪಾಧ್ಯಕ್ಷರು ಪ್ರೇಮ ಸತೋಂಷ್ ಶೇಷಾದ್ರಿ ಗಿಣಿಕಲ್ ಸಹಕರ ಸಂಘದ ಉಪಾಧ್ಯಕ್ಷರು ನಾಗೇಶ್ ಹಿರೆಬೈಲ್ ಪೋರುಶತ್ತಮ್ ಜಗನ್‌ಕೊಪ್ಪ ಕಿರಣ್ ಯಡೂರು ಅರುಣ್ ಕುಂಜು, ಅಹಮ್ಮದ್ ಅಪ್ಪು ಹೆಬ್ಬಾಳ ಬೈಲ್ ಸೋಮಶೇಖರ್ ರಫೀ ಗೌಟಾಣಿ ಇದ್ದರು.
ಈ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ನಾಯಕರಾದ ಡಾ ಆರ್ ಎಂ ಮಂಜುನಾಥ ಗೌಡರು ಬೆಂಬಲವನ್ನು ಸೂಚಿಸಿದರು. ಜೊತೆಗೆ DD ಹಾಗೂ DHO ರವರಿಗೆ ಸ್ಥಳದಿಂದನೇ ಪೋನ್ ಮಾಡಿ ವಿಚಾರಿಸಿದಾಗ ಕೆಲವೇ ದಿನಗಳೊಳಗೆ ಯಡೂರು ಆಸ್ಪತ್ರೆಗೆ ಡಾಕ್ಟರ್ ನೇಮಿಸುವುದಾಗಿ ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಡಾ ಸುಂದರೇಶ್, ಕುರುವಳ್ಳಿ ನಾಗರಾಜ್,ಆಶ್ವಲ್ ಗೌಡ ಜೊತೆಯಲ್ಲಿ ಇದ್ದರು.