ಕೆಸರು ಗುಂಡಿಯಾದ ರಸ್ತೆ: ಗ್ರಾಮಸ್ಥರಿಂದ ಆಕ್ರೋಶ
ಸೊರಬ:ಇಲ್ಲಿನ ಚಂದ್ರಗುತ್ತಿಯ ಬೋವಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಇಂತಹ ಮಳೆಗಾಲದಲ್ಲಿ ರಸ್ತೆ ಅಗೆದು ಓಡಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಂಡರು. ಗ್ರಾಮ ಪಂಚಾಯತಿಯ 14ನೇ ಹಣಕಾಸಿನಲ್ಲಿ 1.5 ಲಕ್ಷ ಅನುದಾನದಲ್ಲಿ ಮೊದಲಿದ್ದ 3ಇಂಚ್ ಪೈಪಲೈನ್ ಬದಲಾಯಿಸಿ 2ಇಂಚ್ ಪೈಪ್ ಹಾಕಿದರು. ಮೊದಲು 3 ಇಂಚ್ ಇದ್ದಾಗ ಸ್ವಲ್ಪವಾದರೂ ನೀರು ಬರುತ್ತಿತ್ತು ಆದರೆ ಈವಾಗ ಪೈಪ್ ಬದಲಾವಣೆಯಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಗುತ್ತಿಗೆದಾರರು ಬಿಲ್ ಗೋಸ್ಕರ…