
KTM ಬೈಕ್ ಅಪಘಾತ – ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲಿಯೇ ಸಾವು
ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಘಟನೆ ಕಾನೇಹಳ್ಳ ಕ್ರಾಸ್ ಬಳಿ ನಡೆದಿದ್ದು ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಗಾಜನೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ನಿಸಾರ್ ಆರ್ ಎಂ (20 ವರ್ಷ) ಮತ್ತು ಯಶವಂತ (20 ವರ್ಷ) ಕಾಲೇಜಿಗೆ ತೆರಳುವಾಗ ಅಪಘಾತ ಸಂಭವಿಸಿ ಇಬ್ಬರು ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಟಿಎಂ ಬೈಕ್ ನಲ್ಲಿ ಇಬ್ಬರು ಕಾಲೇಜಿಗೆ ಹೋಗುವಾಗ ಕಾನೇಹಳ್ಳದ…