ಭ್ರಷ್ಟಾಚಾರದಿಂದ ತುಂಬಿತುಳುಕುತ್ತಿರುವ ರಿಪ್ಪನ್ ಪೇಟೆಯ ನಾಡಕಚೇರಿ! ಗ್ರಾಮಸ್ಥರ ಆಕ್ರೋಶ.
ರಿಪ್ಪನ್ ಪೇಟೆ :ಇಲ್ಲಿನ ನಾಡಕಛೇರಿ ರೈತಸ್ನೇಹಿಯಾಗಿರದೇ ಸುಲಿಗೆಕೋರರ ತಾಣವಾಗಿದೆ ಎಂದು ರಿಪ್ಪನ್ ಪೇಟೆಯ ಗ್ರಾಮಸ್ಥರು ಪಟ್ಟಣದ ನಾಡಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ಗವಟೂರು ಗ್ರಾಮದ ಸರ್ವೇ ನಂಬರ್ 413 ರ 11ಈ ನಕ್ಷೆ ನಾವಿಕರಣ ಕ್ಕೆ 30000 ಸಾವಿರ ರೂಪಾಯಿಗಳನ್ನು ಲಂಚ ತೆಗೆದುಕೊಂಡ ಸರ್ವೆ ಸುಪ್ರವೈಸರ್ ಅಧಿಕಾರಿ ಮಲ್ಲಿಕಾರ್ಜುನ್ ನವೀಕರಣ ಮಾಡದೇ ಮೋಸ ಮಾಡಿದ್ದಾರೆ ಎಂದು ರೈತ ಈಶ್ವರಪ್ಪ ಆರೋಪಿಸಿದ್ದಾರೆ. ನಾಡಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಆರ್ ಎನ್ ಮಂಜುನಾಥ್ ರಿಪ್ಪನ್…