Ripponpete | ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ – ಸುಂದರೇಶ್
ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರು ಹಾಗೂ ಮರಾಠ ಸಮಾಜದ ಪ್ರಮುಖರಾದ ಸುಂದರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್ ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ ಶಿವಾಜಿಯ ಯುದ್ಧ ಕಲೆಗಳು, ಯೋಜನಾ ಶೈಲಿ ಅವಿಸ್ಮರಣೀಯ. ಇಂದಿಗೂ ಪ್ರತಿಯೋರ್ವ ಭಾರತೀಯನ ಎದೆಯಲ್ಲಿ ಅಪ್ರತಿಮ ಹೋರಾಟಗಾರ ಶಿವಾಜಿಯ ಬದುಕು ಹಚ್ಚ ಹಸಿರಾಗಿದೆ ಎಂದರು.
ಮರಾಠ ಯುವ ವೇದಿಕೆಯ ಅಧ್ಯಕ್ಷ ರಾಮಚಂದ್ರ ಮಾತನಾಡಿ ಒಬ್ಬ ವ್ಯಕ್ತಿ ಶಕ್ತಿಯಾಗಿ ರೂಪುಗೊಂಡಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂಬುದಕ್ಕೆ ಶಿವಾಜಿಯೇ ಉತ್ತಮ ನಿದರ್ಶನ. ದೇಶದ ರಕ್ಷಣೆಯಲ್ಲಿ ಎಲ್ಲಾ ವರ್ಗದ ಜನತೆಯನ್ನು ಒಗ್ಗೂಡಿಸಿ ಹೋರಾಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ ಎಂದರು.
ಈ ಸಂಧರ್ಭದಲ್ಲಿ ಮರಾಠ ಸಮಾಜದ ಅಧ್ಯಕ್ಷ ನಾಗರಾಜ್ , ಪ್ರಮುಖರಾದ ನಾಗರತ್ನ ದೇವರಾಜ್, ಕುಷನ್ ದೇವರಾಜ್,ಅರುಣ್ ಕಾಳಮುಖಿ, ದೇವರಾಜ್,ರಾಘು ಶಿವಾನಿ. ತುಳೋಜಿರಾವ್ ,ಮರಾಠ ಸಮಾಜದ ಸದಸ್ಯರು ,ಮರಾಠ ಯುವ ವೇದಿಕೆಯ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.