ಸೊರಬ ತಾಲೂಕಿನಲ್ಲಿ ಮಳೆಯ ಅಬ್ಬರ : ಹಲವೆಡೆ ಪ್ರವಾಹ
ಸೊರಬ:ತಾಲ್ಲೂಕಿನಲ್ಲಿ ಇಂದು ವರುಣನ ಅಬ್ಬರ ಹೆಚ್ವಾಗಿದ್ದು ಹಲವು ಭಾಗಗಳಲ್ಲಿ ಮನೆ, ಕೃಷಿ ಭೂಮಿ ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು ಇಡೀ ತಾಲ್ಲೂಕಿನಲ್ಲಿ ಪ್ರವಾಹವನ್ನು ಸ್ರಷ್ಟಿಸಿದೆ. ಚಂದ್ರಗುತ್ತಿಯ ವರದಾನದಿ,ಸೊರಬದ ಗೌರಿ ಕೆರೆ,ಚನ್ನಪಟ್ಟಣ ಸೇತುವೆ,ಕಡಸೂರ್ ರಸ್ತೆ,ಕತವಾಯಿ ಸೇತುವೆ ಮುಳುಗಡೆಯಾಗಿವೆ, ಇದರಿಂದ ಸಂಪರ್ಕ ರಸ್ತಗಳು ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗಳಮೇಲೆ ಅಪಾಯದಮಟ್ಟ ಮೀರಿ ನೀರು ಹರಿಯುತ್ತಿದ್ದು ವಾಹನಗಳು ಸಂಚರಿಸದಂತೆ ಸೊರಬ ಪೋಲೀಸ್ ಇಲಾಖೆಯವರು ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ಅಳವಡಿಸಿದ್ದಾರೆ, ಹಾಗೂ ಯಾವುದೇ ರೀತಿಯ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ…