ಶಿವಮೊಗ್ಗ:: ತಾಲ್ಲೂಕಿನ ಹಾರನಹಳ್ಳಿ ಸಂತೆ ಮೈದಾನದ ಬಳಿ ಸುಮಾರು 50 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ.
ಅಪರಿಚಿತ ವ್ಯಕ್ತಿಯು ಸುಮಾರು 5.4 ಅಡಿ ಎತ್ತರ ಇದ್ದು, ಬಿಳಿ ಮತ್ತು ಕಪ್ಪುಮಿಶ್ರಿತ ಗಡ್ಡ ಇರುತ್ತದೆ. ತಲೆಯಲ್ಲಿ 2 ಇಂಚು ಉದ್ದನೆಯ ಕಪ್ಪು ಮಿಶ್ರತ ಬಿಳಿ ಕೂದಲಿದ್ದು, ನೀಲಿ ಬಣ್ಣದ ಬಿಳಿ ಗೆರೆಯಿರುವ ತುಂಬು ತೋಳಿನ ಶರ್ಟ್ ಧರಿಸಿರುತ್ತಾರೆ. ಒಂದು ಸಿಮೆಂಟ್ ಮಿಶ್ರಿತ ಕೆಂಪು ಬಣ್ಣದ ಹೊದಿಕೆ ಇರುತ್ತದೆ.
ಈ ಅಪರಿಚಿತ ಶವದ ವಾರಸುದಾರರು ಯಾರಾದರೂ ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.