Headlines

ಶಿವಮೊಗ್ಗ: ಪ್ರಧಾನಿ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಕಟು ಪದ ಬಳಕೆ: ಬಿಜೆಪಿ ಐಟಿ ಸೆಲ್ ನಿಂದ ದೂರು

ಶಿವಮೊಗ್ಗ : ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಬಗ್ಗೆ ಫೇಸ್‌ಬುಕ್‌  ಖಾತೆಯಲ್ಲಿ ಕಟು ಪದಗಳಲ್ಲಿ ನಿಂದಿಸಿದ ಮೋಹನ್ ಕುಮಾರ್ ಎಂಬುವವರನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಜರುಗಿಸಿಬೇಕೆಂದು ನಗರದ ದೊಡ್ಡಪೇಟೆ ಠಾಣೆಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ವತಿಯಿಂದ ದೂರು ನೀಡಲಾಯಿತು.


ಸಾಮಾಜಿಕ ಜಾಲಾತಾಣದಲ್ಲಿ ಪ್ರಧಾನಿಯವರ ಬಗ್ಗೆ ಕಟು ಪದಗಳನ್ನು ಬಳಸಿದ್ದಾರೆ, ಈ ಕೂಡಲೇ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು


 ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶರತ್ ಕಲ್ಯಾಣಿ,ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಆಚಾರ್ಯ,ಜಿಲ್ಲಾ ಸದಸ್ಯರಾದ ಚೇತನ್, ರಮಾನಂದ ನಾಯಕ್,ನಗರ ಸಂಚಾಲಕ ಶ್ರೀನಾಗ್ ಉಪಸ್ಥಿತರಿದ್ದರು.


ವರದಿ:ಮಂಜುನಾಥ ಶೆಟ್ಟಿ ಶಿವಮೊಗ್ಗ

About The Author

Leave a Reply

Your email address will not be published. Required fields are marked *