ರಿಪ್ಪನ್‌ಪೇಟೆ ಸಮೀಪ ಭೀಕರ ಕಾರು ಅಪಘಾತ : ಇಬ್ಬರ ಸ್ಥಿತಿ ಗಂಭೀರ
ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಪದ್ಮಶ್ರೀ ಅನಾಥಾಶ್ರಮದ ಮುಂಭಾಗದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮಣ್ಣಿನ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದೆ. ಶಿವಮೊಗ್ಗದಿಂದ ಚಕ್ರಾ-ಸಾವೇಹಕ್ಲು ಗೆ ತೆರಳುತಿದ್ದ ಕಾರು (KA-01 MJ 2476) ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದ್ದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಅಪಘಾತದ ರಭಸಕ್ಕೆ ಕಾರಿನಿಂದ ಹೊರಕ್ಕೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಪೆಟ್ಟಾಗಿದ್ದು,ಸ್ಥಿತಿ ಗಂಬೀರವಾಗಿದೆ.ಕಾರು ಚಾಲಕನ ಕೈ ಮುರಿತವಾಗಿದೆ.ಇನ್ನುಳಿದ…