ಸಾಗರ : ಏಕಾಏಕಿ ಬಾಲಕನಿಗೆ ಗುಮ್ಮಿದ ಗೂಳಿ – ವೀಡಿಯೋ ವೈರಲ್|sagara

ದಾರಿಯಲ್ಲಿ ಹೋಗುತ್ತಿದ್ದ ಗೂಳಿ ಅಪ್ರಚೋದಿತವಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿ, ಆತನನ್ನು ಕ್ಷಣ ಮಾತ್ರದಲ್ಲಿ ಕೊಂಬುಗಳಿಂದ ಎತ್ತಿ ಬಿಸಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನೆಹರೂ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಸಹೋದರರು ಸೈಕಲ್ ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ನೆಹರು ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.  ಗಾಯಾಳು ಬಾಲಕನನ್ನು 6 ವರ್ಷದ ನಜಾನ್ ಆಲಿಖಾನ್ ಎಂದು ತಿಳಿದು ಬಂದಿದೆ.ಮನೆಯ ಸಮೀಪವೇ ಏಕಾಏಕಿ ಗೂಳಿ  ದಾಳಿ…

Read More

ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ

ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ಸದಸ್ಯ, ಯುವ ಮುಖಂಡ ಹಾಗೂ ಸಂಘಟನಾ ಚಾತುರ್ಯ ಹೊಂದಿದ ನಿರೂಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಈ ಭಾಗದ ಕಾಂಗ್ರೆಸ್ ಸಂಘಟನೆಗೆ ಹೊಸ ಉಜ್ವಲ ಶಕ್ತಿ ತುಂಬಿದಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕುವೆಂಪು ಸಭಾಂಗಣದಲ್ಲಿ…

Read More

ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆಯ ಸಮಗ್ರ ಚಿತ್ರಣವನ್ನು ಬದಲಾಯಿಸುತ್ತೇನೆ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಪಟ್ಟಣದಲ್ಲಿ 4.85 ಕೋಟಿ ರೂಪಾಯಿ ವೆಚ್ಚದ ಬಾಲಕರ ವಸತಿ ನಿಲಯದ ಶಂಕುಸ್ಥಾಪನೆ ಹಾಗೂ 1.65 ಕೋಟಿ ವೆಚ್ಚದ ಸರ್ಕಾರಿ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆ ಯನ್ನು ಉನ್ನತಮಟ್ಟದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸದುಪಯೋಗ ಪಡೆದು ಉನ್ನತ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ…

Read More

ಕೆರೆಯ ಮೀನು ತಿಂದು ಇಬ್ಬರು ಸಾವು – ಅಷ್ಟಕ್ಕೂ ನಡೆದಿದ್ದೇನು..?? | viral news

ಕೆರೆಯ ಮೀನು ತಿಂದು ಇಬ್ಬರು ಸಾವು – ಅಷ್ಟಕ್ಕೂ ನಡೆದಿದ್ದೇನು..?? ಕೆರೆ ಮೀನು ತಿಂದು ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.  ಬಸವಹಳ್ಳಿ ಗ್ರಾಮದ ರವಿಕುಮಾರ್ ​(46), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈವಿಗಳು. ಮೃತರು ಮಾತ್ರವಲ್ಲದೇ ಈ ಮೀನುಗಳನ್ನು ತಿಂದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅರಕಲಗೂಡು ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ಬೇಸಿಗೆಗೆ ಗ್ರಾಮದ ಕೆರೆ…

Read More

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ಮಲ್ಲಂದೂರಿನ ಸಂತೋಷ್ ಅಗ್ರೋ ಕಂಪನಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಸುತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ ತಕ್ಷಣ ಕಾರ್ಮಿಕರು ಅವರನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ವೀಲ್ ಕಟ್ ಆಗಿ ನಿಯಂತ್ರಣ ತಪ್ಪಿ ಅಡಕೆ ತೋಟಕ್ಕೆ ನುಗ್ಗಿದ ಬಸ್ – 25 ಪ್ರಯಾಣಿಕರು ಪಾರು

A private bus lost control after a wheel cut near Sheerihalli village in Shikaripura taluk of Shivamogga district and crashed into an areca nut garden. Over 25 passengers escaped with minor injuries. ವೀಲ್ ಕಟ್ ಆಗಿ ನಿಯಂತ್ರಣ ತಪ್ಪಿ ಅಡಕೆ ತೋಟಕ್ಕೆ ನುಗ್ಗಿದ ಬಸ್ – 25 ಪ್ರಯಾಣಿಕರು ಪಾರು ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್‌ನ ಚಕ್ರದ…

Read More

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎನ್.ಸತೀಶ್, ಎಂ.ಬಿ.ಮಂಜುನಾಥ,ಆನಂದ್ ಮೆಣಸೆ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಆರ್.ಟಿ.ಗೋಪಾಲ, ಜಿಲ್ಲಾ ಪಂಚಾಯಿತಿ ಮಾಜಿ…

Read More

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧ ಆಯ್ಕೆ

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧ ಆಯ್ಕೆ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಂಚನಾಲ ಗ್ರಾಪಂ ಅಧ್ಯಕ್ಷರಾಗಿದ್ದ ಉಬೇದುಲ್ಲಾ ಷರೀಫ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮಹಮ್ಮದ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9 ಸದಸ್ಯರನ್ನು ಹೊಂದಿರುವ ಕೆಂಚನಾಲ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಷರೀಫ್ ನಾಮಪತ್ರ ಸಲ್ಲಿಸಿದ್ದರು.ನಿಗದಿತ…

Read More

ಸಾಗರದಲ್ಲಿ ಪಾದಚಾರಿಗೆ ಕಾರಿನಲ್ಲಿ ಗುದ್ದಿ ಚಾಲಕ ಪರಾರಿ:

ಸಾಗರ: ಇಲ್ಲಿನ ಸಿಂಗಂದೂರು ರಸ್ತೆಯ ಸಂಜಯ್ ಮೆಮೋರಿಯಲ್ ಕಾಲೇಜು ಬಳಿ ಆದಿಶಕ್ತಿ ನಗರದ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಜೆ 7.30 ರ ಸುಮಾರಿಗೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಆದಿಶಕ್ತಿ ನಗರದ ಬಾಬು(47) ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಾಗರ ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಶರೀರವನ್ನು ಸಾಗರ…

Read More

ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !! ಏನಿದು ಸ್ಟೋರಿ.!?

ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !!? ಏನಿದು ಸ್ಟೋರಿ ‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಊಟವನ್ನೂ ಅರ್ಧಕ್ಕೆ ಬಿಟ್ಟು ಆತ ಹೋಗಿದ್ದ. ಆದರೆ, ವಾಪಸ್ ಬರಲೇ ಇಲ್ಲ! ಪ್ರೇಯಸಿಯ ಅಣ್ಣನೇ ಆತನನ್ನು ನೇರವಾಗಿ ಮತ್ತೆ ಬಾರದ ಲೋಕಕ್ಕೆ ಕಳುಹಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು…

Read More