Headlines

ರಿಪ್ಪನ್ ಪೇಟೆ : ಒಂಬತ್ತನೇ ಮೈಲಿಗಲ್ಲು ಬಳಿ ಹಿಟ್ ಆಂಡ್ ರನ್ – ಬೈಕ್ ಸವಾರನಿಗೆ ಗಾಯ

ರಿಪ್ಪನ್ ಪೇಟೆ : ಒಂಬತ್ತನೇ ಮೈಲಿಗಲ್ಲು ಬಳಿ ಹಿಟ್ ಆಂಡ್ ರನ್ – ಬೈಕ ಸವಾರನಿಗೆ ಗಾಯ

ಮಾರುತಿ ಬ್ರೀಜಾ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳುತಿದ್ದು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.

ರಿಪ್ಪನ್ ಪೇಟೆ : ಇಲ್ಲಿನ ಒಂಬತ್ತನೇ ಮೈಲಿಗಲ್ಲು ಬಳಿಯಲ್ಲಿ ಸ್ಕೂಟಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೆಗ್ಗಾನ್ ಗೆ ದಾಖಲಾಗಿರುವ ಘಟನೆ ನಡೆ‍ದಿದೆ.

ರಿಪ್ಪನ್ ಪೇಟೆಯ ಶಬರೀಶನಗರದ ನಿವಾಸಿ ಮಂಜನಾಯ್ಕ್ (69) ಗಾಯಗೊಂಡ ವ್ಯಕ್ತಿಯಾಗಿದ್ದಾರೆ.

ಅರಸಾಳು ಗ್ರಾಪಂ ವ್ಯಾಪ್ತಿಯ ಒಂಬತ್ತನೇ ಮೈಲಿಕಲ್ಲು ಬಳಿ ರಿಪ್ಪನ್ ಪೇಟೆಯಿಂದ ಸೂಡೂರಿನಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿರುವಾಗ ಹಿಂಬದಿಯಿಂದ ಏಕಾಏಕಿ ವೇಗವಾಗಿ ಬಂದ ಅಪರಿಚಿತ ಕಾರು ಡಿಕ್ಕಿಯಾಗಿ ಬೈಕ್ ಸವಾರ ನೆಲಕ್ಕುರುಳಿದ್ದಾರೆ ಆದರೆ ಅಪರಿಚಿತ ವಾಹನದ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ.ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದ ಆಲುವಳ್ಳಿ ಗ್ರಾಮದ ಯುವಕರು ಗಾಯಾಳುವನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ.

ಮಾರುತಿ ಬ್ರೀಜಾ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳುತಿದ್ದು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.