ದಂಪತಿಗಳ ಪೋಷಾಕಿನಲ್ಲಿ ಬಾಡಿಗೆ ಮನೆ ಕೇಳಿಕೊಂಡು ಬಂದು ಮನೆಗೆ ನುಗ್ಗಿ ಕಳ್ಳತನ – ಖತರ್ನಾಕ್ ಮಹಿಳೆ ಬಂಧನ
ಮನೆ ಬಾಡಿಗೆಗೆ ಬೇಕು ಎಂದು ದಂಪತಿಗಳ ಪೋಷಾಕಿನಲ್ಲಿ ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣವನ್ನ ಹೊತ್ತೊಯ್ದ ಘಟನೆ ಶಿವಮೊಗ್ಗದ ಜಯನಗರದಲ್ಲಿ ನಡೆದಿದೆ.ಕಳ್ಳತನಕ್ಕೆ ಬುರ್ಖಾ ಧರಿಸಿ ಬಂದಿದ್ದ ಖತರ್ನಾಕ್ ಲೇಡಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಹಿನ್ನಲೆ : ಶಿವಮೊಗ್ಗ ನಗರದ ಜಯನಗರ ಮೊದಲನೇ ತಿರುವಿನಲ್ಲಿರುವ ಸಮರ್ಥ ಅಪಾರ್ಟ್ ಮೆಂಟ್ ನ ಬಳಿ ಬುರ್ಕಾ ಹಾಕಿಕೊಂಡು ಬಂದ ಅಪರಿಚಿತ ಮಹಿಳೆ ಮತ್ತು ಅಪರಿಚಿತ ಪುರುಷ ಮನೆ ಬಾಡಿಗೆ ಇದೆಯಾ ಎಂದು ವಿಚಾರಿಸಿದ್ದಾರೆ.. ಪಕ್ಕದ…