ಕಾಂಗ್ರೆಸ್ ಬೇಡಿಕೆಯಂತೆ ನಡೆದುಕೊಳ್ಳಲು ಸಾಧ್ಯವಿಲ್ಲವೆಂದು ಗೃಹಸಚಿವ ಆರಗ ಜ್ಞಾನೇಂದ್ರ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪನವರ ಪಾತ್ರದ ಆರೋಪವನ್ನ ತಳ್ಳಿ ಹಾಕಿದ್ದಾರೆ.
ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಈಶ್ವರಪ್ಪನವರ ಪಾತ್ರದ ಬಗ್ಗೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಸಿಎಂ ಬೊಮ್ಮಾಯಿ ಅವರು ಸಹ ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮೊದಲು ತನಿಖೆಯಾಗಲಿ ಎಂದು ಗೃಹಸಚಿವ ಈಶ್ವರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ. ಉಡುಪಿ ಎಸ್ಪಿ ಜೊತೆ ಮಾತನಾಡಿದ್ದೇನೆ.ಎಫ್‌ಎಸ್ ಎಲ್ ನವರು ಉಡುಪಿಗೆ ತಲುಪಿದ್ದಾರೆ.ಅವರು ಬರುವವರೆಗೆ ಲಾಡ್ಜ್ ನ ಡೋರ್ ಮಾಡಿಲ್ಲ ಎಂದು ಗೃಹಸಚಿವರು ತಿಳಿಸಿದರು.
ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ. ಉಡುಪಿ ಎಸ್ಪಿ ಜೊತೆ ಮಾತನಾಡಿದ್ದೇನೆ.ಎಫ್‌ಎಸ್ ಎಲ್ ನವರು ಉಡುಪಿಗೆ ತಲುಪಿದ್ದಾರೆ.ಅವರು ಬರುವವರೆಗೆ ಲಾಡ್ಜ್ ನ ಡೋರ್ ಮಾಡಿಲ್ಲ ಎಂದು ಗೃಹಸಚಿವರು ತಿಳಿಸಿದರು.
ಡೆತ್ ನೋಟ್ ಬರೆದಿರುವ ಬಗ್ಗೆ ಗೊತ್ತಿಲ್ಲ ವಾಟ್ಸಪ್ ನಲ್ಲಿ ಆತ ಬರೆದಿಟ್ಟಿದ್ದಾನೆ. ಈ ಅಂಶದ ಮೇಲು ತನಿಖೆ ನಡೆಯಲಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಯಲ್ಲಿ ಈಶ್ವರಪ್ಪನವರ ವಿರುದ್ಧ ಪ್ರಕರಣ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದರೂ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲವೆಂದು ದೂರಿದ್ದಾರೆ ಎಂಬ ಮಾತು ಸುಳ್ಳು ಎಂದು ಪರೋಕ್ಷವಾಗಿ ಗೃಹಸಚಿವರು ತಿಳಿಸಿದರು.<
>40% ಆರೋಪ ಪದೇ ಪದೇ ಆರೋಪ ಕೇಳಿ ಬರುತ್ತಿದೆ. ಇದು ಸರ್ಕಾರದ ಮೇಲೆ ಕೆಟ್ಟಪರಿಣಾಮ ಬೀರುವುದಿಲ್ಲವೇ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೊದಲು ತನಿಖೆ ಆರಂಭವಾಗಲಿ ನಂತರ ಸರ್ಕಾರ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬುದು ತಿಳಿಯಲಿದೆ ಎಂದರು.

‘