ಭದ್ರಾವತಿ : ಈಜಲು ಅಣೆಕಟ್ಟೆಗೆ ಹೋದ ಇಬ್ಬರು ಕಾಲೆಜು ವಿದ್ಯಾರ್ಥಿಗಳು ಸಾವು
ಭದ್ರಾವತಿ ಸಮೀಪದ ಗೊಂದಿ ಅಣೆಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು ಕಂಡ ಹೃದಯ ವಿದ್ರಾವಕ ಘಟನೆ ಇಂದು ಮಧ್ನಾಹ್ನ ಗೊಂದಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಗಾಡಿಕೊಪ್ಪ ಹಾಗೂ ಕೊಮ್ಮನಾಳ್ ಗ್ರಾಮದ ಕಿರಣ್ ಹಾಗೂ ಶಶಾಂಕ್ (19 ವರ್ಷ) ಎಂಬುವರೇ ಸಾವು ಕಂಡ ನತದೃಷ್ಟ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಶಿವಮೊಗ್ಗದ ಎಡುಕೇರ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಈ ನತದೃಷ್ಟರು ಸ್ನೇಹಿತರೊಂದಿಗೆ ಗೊಂದಿ ಗ್ರಾಮದಲ್ಲಿರುವ ನೈಸರ್ಗಿಕ ಸೊಬಗನ್ನು ನೋಡಲು ಬಂದಿದ್ದಾರೆ, ಒಟ್ಟು ಐವರು ಕಾಲೇಜು ವಿದ್ಯಾರ್ಥಿಗಳಲ್ಲಿ…