ರಿಪ್ಪನ್ ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 17ಕ್ಕೆ
ರಿಪ್ಪನ್‌ಪೇಟೆ: ಪಟ್ಟಣದ ರೋಟರಿ ಕ್ಲಬ್‌ನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 17ರ ಭಾನುವಾರ ವಿಶ್ವಮಾನವ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ತಿಳಿಸಿದರು. ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ಸದಸ್ಯರು ಪ್ರಪ್ರಥಮವಾಗಿ ಮಹಿಳಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದಾರೆ, ಇದರ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು ಸೇವೆಯಲ್ಲಿ ಮಹಿಳೆಯರ ಹೆಚ್ಚು ಪಾಲ್ಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ. ಸಂಸ್ಥೆಯು ಇಮ್ಯಾಜಿನ್ ರೋಟರಿ ಎಂಬ ಕಲ್ಪನೆಯನ್ನು ಕೊಟ್ಟಿದ್ದು ಸಮಾನ ಶಿಕ್ಷಣ,…