ಸಮಾಜದ ಮಹಿಳಾ ವರ್ಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿರುವ ಹೊಸನಗರದ ಸೀಮಾ ಕಿರಣ್ ತೆಂಡೂಲ್ಕರ್ :
ಹೊಸನಗರ, ತಾಲ್ಲೂಕಿನ ಕೊಡಚಾದ್ರಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷೆ ಸೀಮಾ ಶರಾವ್ ರವರ ಸಮಾಜ ಮುಖಿ ಕೆಲಸಗಳಿಗೆ ಸಾರ್ವಜನಿಕರ ಗಮನ ಸೆಳೆದಿದೆಯಲ್ಲದೇ ತಾಲ್ಲೂಕಿನ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಾಗಿದೆ. ಸೀಮಾ ಕಿರಣ್ ತೆಂಡೂಲ್ಕರ್ ರವರು ಹಲವು ವರ್ಷಗಳಿಂದ ಸದಸ್ಯರಾಗಿದ್ದ ಹೊಸನಗರದ ಕೊಡಚಾದ್ರಿ ಜೆಸಿಐ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗಿ ಮೂರೇ ತಿಂಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸನಗರ…