w
Headlines
Home » ರಿಪ್ಪನ್‌ಪೇಟೆಗೂ ತಟ್ಟಿತಾ ಯುದ್ದ ಬಿಸಿ – ಪೆಟ್ರೋಲ್‌ಗೆ ಮುಗಿಬಿದ್ದ ಜನತೆ

ರಿಪ್ಪನ್‌ಪೇಟೆಗೂ ತಟ್ಟಿತಾ ಯುದ್ದ ಬಿಸಿ – ಪೆಟ್ರೋಲ್‌ಗೆ ಮುಗಿಬಿದ್ದ ಜನತೆ

GridArt 20260320

Panic buying grips Ripponpet as residents rush to purchase petrol and diesel amid war fears, leaving multiple fuel stations dry and causing long queues at the only operational bunk.

ರಿಪ್ಪನ್‌ಪೇಟೆ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಆತಂಕದ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಅದರ ಬಿಸಿ ತಟ್ಟತೊಡಗಿದ್ದು, ರಿಪ್ಪನ್‌ಪೇಟೆಯಲ್ಲಿ ಇಂಧನಕ್ಕಾಗಿ ಜನರು ಮುಗಿಬಿದ್ದ ಘಟನೆ ಗಮನ ಸೆಳೆದಿದೆ.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡು, ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಇಂಧನ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ಸಾಮಾನ್ಯವಾಗಿ ಶಾಂತವಾಗಿರುವ ಈ ಪ್ರದೇಶದಲ್ಲಿ ಏಕಾಏಕಿ ಉಂಟಾದ ಈ ದಟ್ಟಣೆ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.

ರಿಪ್ಪನ್‌ಪೇಟೆಯಲ್ಲಿ ಒಟ್ಟು ನಾಲ್ಕು ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಮೂರು ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ ಎಂಬ ಗಾಳಿಸುದ್ದಿಯ ಹಿನ್ನೆಲೆ, ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್ ನಲ್ಲಿ ಮಾತ್ರ ಇಂಧನ ಲಭ್ಯವಿದ್ದ ಕಾರಣ ಜನರು ಅಲ್ಲಿಗೆ ದೌಡಾಯಿಸಿದ್ದಾರೆ.

ಇದಲ್ಲದೆ, ಕೆಲವರು ಖಾಲಿ ಬಾಟಲ್‌ಗಳು ಹಾಗೂ ಕ್ಯಾನ್‌ಗಳನ್ನು ತಂದು ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸುತ್ತಿರುವುದು ಗಮನಾರ್ಹವಾಗಿದೆ. ಇದರಿಂದ ಇಂಧನ ಕೊರತೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಹಿತಿಯ ಪ್ರಕಾರ ತೀರ್ಥಹಳ್ಳಿ ರಸ್ತೆಯ MRPL ಪೆಟ್ರೋಲ್ ಬಂಕ್ ನಲ್ಲಿ ಸಾಕಷ್ಟು ಪೆಟ್ರೋಲ್ ಲಭ್ಯವಿದೆ ಎಂದು ಬಂಕ್ ನ  ಮಾಲೀಕರು ಸ್ಪಷ್ಟ ಪಡಿಸಿದ್ದು  ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.