ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ : ಕಿಮ್ಮನೆ ಸವಾಲು
ಶಿವಮೊಗ್ಗ : ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ಸಾಮರ್ಥ್ಯ ಇದ್ದರೆ ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ. ಆರು ತಿಂಗಳಲ್ಲಿ ಫಲಿತಾಂಶ ಕೊಡಿ. ಇದರಲ್ಲಿ ನನ್ನ ಹಸ್ತಕ್ಷೇಪವೆಗಿರುವುದು ಗುಲಗಂಜಿಯಷ್ಟು ಸಾಬೀತಾದರೆ ನಾನು ಸಾರ್ವಜನಿಕ ಕ್ಷೇತ್ರದಿಂದ ನಿವೃತ್ತಿಯಾಗುತ್ತೇನೆ. ಇಲ್ಲದಿರೆ ರಾಜ್ಯದ ಗೃಹಮಂತ್ರಿಗಳು ತೀರ್ಥಹಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು. ಅವರಿಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ 01-11-2014 ರಿಂದ 2018 ರವರೆಗೆ ಸತತವಾಗಿ ಆರಗ ಜ್ಞಾನೇಂದ್ರ…