ರಿಪ್ಪನ್‌ಪೇಟೆ;-ಮಕ್ಕಳ ದೈಹಿಕ ಸಾಮಾರ್ಥ್ಯವನ್ನು ಹೆ ಚ್ಚಿಸಲು ಕ್ರೀಡೆ ಅಗತ್ಯವಾಗಿದೆ.ವಿದ್ಯಾರ್ಥಿ ಸದಾ ಉಲ್ಲಾಸದಿಂದಿರಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ.ಕ್ರೀಡೆ ಸೋಲು ಗೆಲುವು ಮುಖ್ಯವಾಗದೇ ಮಕ್ಕಳು ಭಾಗವಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್.ಕೃಷ್ಣಮೂರ್ತಿ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೆಗೌಡ ಕ್ರೀಡಾಂಗಣದಲ್ಲಿ ರಿಪ್ಪನ್‌ಪೇಟೆ-ಬಾಳೂರು ಗ್ರಾಮ ಪಂಚಾಯ್ತಿ ಸಮೂಹ ಸಂಪನ್ಮೂಲ ಕೇಂದ್ರ ಎಸ್.ಡಿ.ಎಂ.ಸಿ.ಹಾಗೂ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಅಶ್ರಯದಲ್ಲಿ “ಕ್ಲಸ್ಟರ್ ಮಟ್ಟದ ೧೪ ವರ್ಷದೊಳಗಿನ ಮಕ್ಕಳ ೨೦೨೨-೨೩ ನೇ ಸಾಲಿನ ಪ್ರಾಥಮಿಕ ಪಾಠಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದಿಂದ ಕ್ರೀಡಾಕೂಟಗಳಿಗೆ ಕಡಿಮೆ ಹಣ ನೀಡುತ್ತದೆ ಅದು ಸಾಲದು ಗ್ರಾಮದ ದಾನಿಗಳ ಸಹಕಾರದೊಂದಿಗೆ ಕ್ರೀಡಾಕೂಟವನ್ನು ಕಡಿಮೆ ಖರ್ಚಿನಲ್ಲಿ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಿಸುವಂತೆ ಹೇಳಿದರು.
ಕ್ರೀಡಾಕೂಟ ಸಮಾರಂಭವನ್ನು ಗುಡ್‌ಶಫರ್ಡ್ ಚರ್ಚ್ ಪಾದರ್ ರೆ.ಬಿನೋಯ್ ಉದ್ಘಾಟಿಸಿದರು.
ಕ್ರೀಡಾ ದ್ವಜಾರೋಹಣವನ್ನು ಗ್ರಾಮಾಧ್ಯಕ್ಷೆ ಮಂಜುಳಕೇತಾರ್ಜಿರಾವ್, ಕ್ರೀಡಾಜ್ಯೋತಿಯನ್ನು ಉಪಾಧ್ಯಕ್ಷೆ ಮಹಾಲಕ್ಷಿ ಬಾಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದಿವಾಕರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ್,ದೈಹಿಕ ಶಿಕ್ಷಣಾಧಿಕಾರಿ ಬಾಲಚಂದ್ರ,ಸಮನ್ವಯ ಅಧಿಕಾರಿ ರಂಗನಾಥ,ಗ್ರಾಮ ಪಂಚಾಯ್ತಿ ಸದಸ್ಯರುಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದಲ್ಲಿ ಗೆದ್ದ ತಂಡಗಳ ವಿವರ ಇಂತಿದೆ :
ಬಾಲಕರ ವಾಲಿಬಾಲ್:
1> ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2> ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
ಬಾಲಕರ ಕಬ್ಬಡಿ :
1> ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2> ಗುಡ್ ಶೆಪರ್ಡ್ ಹಿರಿಯ ಪ್ರಾಥಮಿಕ ಶಾಲೆ
ಬಾಲಕರ ಖೊಖೊ :
1>ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2>ಅಂಬೇಡ್ಕರ್ ಹಿರಿಯ ಪ್ರಾಥಮಿಕ ವಸತಿ ಶಾಲೆ ಕೆರೆಹಳ್ಳಿ
ಬಾಲಕರ ಥ್ರೋ ಬಾಲ್ :
1>ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೂರು
2>ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
—————–
ಬಾಲಕಿಯರ ವಾಲಿಬಾಲ್ :
1>ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2>ಗುಡ್ ಶೆಪರ್ಡ್ ಹಿರಿಯ ಪ್ರಾಥಮಿಕ ಶಾಲೆ
ಬಾಲಕಿಯರ ಕಬ್ಬಡಿ :
1>ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2>ಗುಡ್ ಶೆಪರ್ಡ್ ಹಿರಿಯ ಪ್ರಾಥಮಿಕ ಶಾಲೆ
ಬಾಲಕಿಯರ ಖೊಖೊ :
1>ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
2>ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ರಿಪ್ಪನ್‌ಪೇಟೆ
ಬಾಲಕಿಯರ ಥ್ರೋ ಬಾಲ್ : ಪಲಿತಾಂಶ ತಡೆಹಿಡಿಯಲಾಗಿದೆ.
ಅಥ್ಲೆಟಿಕ್ಸ್ ಪಲಿತಾಂಶಗಳ ವಿವರ ಇಲ್ಲಿ ನೋಡಿ :
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇