Headlines

ಸರ್ವರನ್ನು ಪ್ರೀತಿಸುವ ಧರ್ಮವೇ ವೀರಶೈವ ಧರ್ಮ : ಮಳಲಿ ಶ್ರೀ

ರಿಪ್ಪನ್‌ಪೇಟೆ : ವೀರಶೈವ ಧರ್ಮ ಸರ್ವರನ್ನು ಪ್ರೀತಿಸುವ ಧರ್ಮವಾಗಿದೆಯೆಂದು ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. 


ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾ, ಪೂಜಾರಗೊಪ್ಪ- ಮಸರೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತ ಮಂಡಳಿ ಹಮ್ಮಿಕೊಂಡಿದ್ದ ಇಷ್ಟ ಲಿಂಗ ಪೂಜೆ ನೆರವೇರಿಸಿ ನುಡಿದರು. ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ಸರ್ವ ಧರ್ಮದವರಿಗೂ ಅನ್ವಯವಾಗುವ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ. ದಯ, ಕ್ಷಮ, ಜಪ, ಪೂಜೆ, ದ್ಯಾನ, ದಾನ, ಹೀಗೆ ಭೋಧಿಸಿದ್ದಾರೆಂದರು. ಶ್ರೀಗುರು ಕರುಣಿಸಿದ ಇಷ್ಟ ಲಿಂಗದ ಮಹತ್ವವೂ ಅತೀ ಅಗತ್ಯವಾಗಿದೆ. ಅನಿಷ್ಟವನ್ನು ಕಳೆದು ಇಷ್ಟಾರ್ಥವನ್ನು ಪೂರೈಸುವ ಶಕ್ತಿ ಇಷ್ಟಲಿಂಗದಲ್ಲಿ ಇದೆ. ಆದರೆ ಅದು ನಿಷ್ಠೆಯಿಂದ ಪೂಜೆ ಮಾಡಿದಾಗ ಮಾತ್ರ ಸಾಧ್ಯ ಎಂದರು.


 ಈ ಪವಿತ್ರ ಪೂಜಾ ಸಮಾರಂಭದಲ್ಲಿ ಅರ್ಚಕರಾದ ಶಿವಾನಂದಪ್ಪ, ರಾಚಪ್ಪ, ಹಿರಿಯರಾದ ಬೆಳಂದೂರಿನ ತಾತೇಶ್ವರಪ್ಪಗೌಡು, ಕಗ್ಗಲಿಯ ಪುಟ್ಟಸ್ವಾಮಿಗೌಡ್ರು, ಜಗದೀಶ್‌ಗೌಡರು, ಮಸರೂರಿನ ಮುರುಗೇಶಪ್ಪ ಗೌಡ್ರು, ಮತ್ತು ಕುಟುಂಬದವರು ಹಾಗು ಭಕ್ತಾದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *