Thirthahalli | ಮೇಲಿನ ಕುರುವಳ್ಳಿ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ಸ್ಥಳೀಯರು

ತೀರ್ಥಹಳ್ಳಿ : ಪಟ್ಟಣದ ಸಮೀಪದ ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಲೇಔಟ್ ಹಿಂಭಾಗದ ಕಾಡಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಸ್ಥಳೀಯರು ಭಾನುವಾರ ಸಂಜೆ ಕಟ್ಟಿಗೆ ಕಡಿಯಲು ಹೋದಾಗ ಹುಲಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲ್ಕೈದು ದಿನದ ಹಿಂದೆ ರಾತ್ರಿಯ ವೇಳೆ ಲೇಔಟ್ ಸಮೀಪದಲ್ಲಿ ಹುಲಿ ಕೂಗಿದ ಘರ್ಜನೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂದೆ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Read More

ಚಲಿಸುತಿದ್ದ ಬಸ್ ನಿಂದ ಆಯತಪ್ಪಿ ಕೆಳಗೆ ಬಿದ್ದು SSLC ವಿದ್ಯಾರ್ಥಿ ಸಾವು

ಚಲಿಸುತಿದ್ದ ಬಸ್ ನಿಂದ ಆಯತಪ್ಪಿ ಕೆಳಗೆ ಬಿದ್ದು SSLC ವಿದ್ಯಾರ್ಥಿ ಸಾವು ಶಿವಮೊಗ್ಗ(Shivamogga) ಜಿಲ್ಲೆ ಶಿಕಾರಿಪುರ ತಾಲೂಕಿನ ಸಿದ್ದನಪುರ ಗ್ರಾಮದಲ್ಲಿ ಬಸ್(bus) ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಎಸ್‌ಎಸ್‌ಎಲ್ ಸಿ (SSLC) ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ಆದಿತ್ಯ(15) ಮೃತಪಟ್ಟ ವಿದ್ಯಾರ್ಥಿ ಎಂದು ಹೇಳಲಾಗಿದೆ.  ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ಓದುತ್ತಿದ್ದ ಆದಿತ್ಯ ಭಾನುವಾರ ಶಿಕಾರಿಪುರಕ್ಕೆ ಬಂದಿದ್ದು, ಸಂಜೆ ಊರಿಗೆ ಮರಳುವಾಗ ಘಟನೆ ನಡೆದಿದೆ. ಬಸ್ ನಿಲ್ದಾಣ ಬರುತ್ತಿದ್ದಂತೆ ಆದಿತ್ಯ ಬಾಗಿಲ ಬಳಿ ಬಂದಿದ್ದಾರೆ. ಈ ವೇಳೆ ಬಸ್…

Read More

ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕಗಳಲ್ಲಿ ವಿದ್ಯಾರ್ಥಿನಿಯರ ದಿಗ್ಗಜ ಸಾಧನೆ

ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕಗಳಲ್ಲಿ ವಿದ್ಯಾರ್ಥಿನಿಯರ ದಿಗ್ಗಜ ಸಾಧನೆ Kuvempu University convocation highlights academic excellence as girl students dominate gold medals, with Abhishek H.M. securing top rank with 10 medals. ಶಿವಮೊಗ್ಗ, ಮೇ 6: ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭವು ಈ ಬಾರಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳಿಂದ ವಿಶೇಷ ಗಮನ ಸೆಳೆದಿದ್ದು, ಅದರಲ್ಲೂ ವಿದ್ಯಾರ್ಥಿನಿಯರು ಚಿನ್ನದ ಪದಕಗಳ ಬಹುಪಾಲು ತಮ್ಮದಾಗಿಸಿಕೊಂಡು ಮೆರುಗು ತೋರಿದ್ದಾರೆ. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ…

Read More

ಜೆಡಿಎಸ್ ಹೊಂದಾಣಿಕೆ ಬಿಜೆಪಿಗೆ ಆನೆಬಲ – ಬಿ ವೈ ರಾಘವೇಂದ್ರ | BYR

ಜೆಡಿಎಸ್ ಹೊಂದಾಣಿಕೆ ಬಿಜೆಪಿಗೆ ಆನೆಬಲ – ಬಿ ವೈ ರಾಘವೇಂದ್ರ | BYR ರಿಪ್ಪನ್‌ಪೇಟೆ;-ಜೆಡಿಎಸ್ ಜೊತೆಗೆ ಹೊಂದಾಣಿಕೆ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ ವೈ ರಾಘವೇಂದ್ರ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಆಯೋಜಿಸಲಾದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು ಅವರು ಹಲವು ವರ್ಷಗಳ ಕಾಲ ಬಿಜೆಪಿಯ ತತ್ವ ಸಿದ್ಧಾಂತವನ್ನು ದ್ವೇಷಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಂತಹ ಒಂದು ಕರೆಗೆ…

Read More

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ ಶಿವಮೊಗ್ಗ : ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಿವಾಸಿ ಪಾಲಾಕ್ಷಮ್ಮ  ಅವರ  ಮಗಳು ಅಡಮಾನವಿಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ಹೇಳಿದ್ದರಿಂದ ತಮ್ಮ ಗ್ರಾಮದ ಬಳಿ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ೧,೭೫,೦೦೦ ಹಣವನ್ನು ಬಿಡಿಸಿಕೊಂಡು ಜೂನ್ ೧೪ರಂದು ಎನ್‌ಆರ್ ಪುರದಲ್ಲಿರುವ ಅವಳ…

Read More

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ ಉಡುಪಿ : ಕಳೆದ ಆರು ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕ್ಷಣ ಶನಿವಾರ ನಡೆದ ರಾಷ್ಟ್ರಿಯ ಲೋಕ ಅದಾಲತ್‍ನಲ್ಲಿ ಸಾಕ್ಷಿಯಾಯಿತು. ಪ್ರಕರಣದ ಹಿನ್ನಲೆ: ಸೊರಬದ ರಾಘವೇಂದ್ರ ಆಚಾರ್ಯರವರು ಮಂದಾರ್ತಿ ಮುದ್ದುಮನೆಯ ಮಾಲತಿಯವರೊಂದಿಗೆ 2018 ನೇ ಏಪ್ರಿಲ್‍ನಲ್ಲಿ ಯಡ್ತಾಡಿಯ ಚಾಮುಂಡೇಶ್ವರಿ ಸಭಾ ಭವನದಲ್ಲಿ ವಿವಾಹ ಆಗಿದ್ದರು. ಮದುವೆ ಆದ ಸ್ವಲ್ಪ ಸಮಯದ ನಂತರ…

Read More

ಕೌಟುಂಬಿಕ ಕಲಹ : ಪತಿಯಿಂದ ಪತ್ನಿಯ ಮೇಲೆ ಆಸಿಡ್ ದಾಳಿ|acid

ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಸಿಟ್ಟಿನಿಂದ ಹೆಂಡತಿಯ ಮೈಮೇಲೆ ಆಸಿಡ್ ಎರಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಗ್ರಾಮವೊಂದರ ನಿವಾಸಿಯಾದ ಸಂತ್ರಸ್ತೆಯು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ಧಾರೆ. ಬಿಡುವಾದಾಗ ತನ್ನ ಮಕ್ಕಳನ್ನು ನೋಡಲು ತನ್ನ ತಾಯಿ ಮನೆಗೆ ಬರುತ್ತಿದ್ದರು. ಇನ್ನೂ ಪತ್ನಿಯ ಜೊತೆಗೆ ಜಗಳ ತೆಗೆದು ದೂರವೇ ಇದ್ದ ಪತಿಯು ಆಗಾಗ ಪತ್ನಿಯ ತಾಯಿ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ. ಈ ನಡುವೆ ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಪತ್ನಿಯ ತಾಯಿ ಮನೆಗೆ ಬಂದ ಗಂಡ, ಅದೇ…

Read More

ಹನಿಟ್ರ್ಯಾಪ್ : ನಗ್ನ ವೀಡಿಯೋ ಮಾಡಿ ಹಣಕ್ಕಾಗಿ ಬೆದರಿಸುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಸೇರಿ ಇಬ್ಬರು ಬಂಧನ

ಹನಿ ಟ್ರಾಪ್‌ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.  ಯುವಕನೊಬ್ಬನ ನಗ್ನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಯುವಕನಿಗೆ ಹೆದರಿಸಿದ್ದಾರೆ. ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗದ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. ಬಂಧಿತ ಆರೋಪಿಗಳು. ಆರೋಪಿ ಅಜಿತ್ ಜತೆ…

Read More

ಶಿವಮೊಗ್ಗ–ಸಾಗರ ಬಸ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ , 45 ಸಾವಿರ ನಗದು ಕಳವು

ಶಿವಮೊಗ್ಗ–ಸಾಗರ ಬಸ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ , 45 ಸಾವಿರ ನಗದು ಕಳವು A woman traveling from Shivamogga to Sagara lost 171 grams of gold ornaments worth around ₹17 lakh and ₹45,000 cash after an alleged theft from her vanity bag on a private bus. Tunga Police have registered a case. ಶಿವಮೊಗ್ಗ: ಶಿವಮೊಗ್ಗದಿಂದ ಸಾಗರದತ್ತ…

Read More

ಭಾರಿ ಮಳೆಯ ಹಿನ್ನಲೆ ಹೊಸನಗರ,ಸಾಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ :

ಮಲೆನಾಡಿನಾದ್ಯಂತ ಮಳೆ ಅಬ್ಬರಿಸುತ್ತಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.    ಜಿಲ್ಲೆಯ ಹೊಸನಗರ ತೀರ್ಥಹಳ್ಳಿ ಸಾಗರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಮೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More