“ಶಿಕ್ಷಣ ಸಚಿವ ಮಧುಬಂಗಾರಪ್ಪನರಿಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ’’
ರಿಪ್ಪನ್‌ಪೇಟೆ;-ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ತೀರ್ಥಹಳ್ಳಿಗೆ ರಿಪ್ಪನ್‌ಪೇಟೆ ಮಾರ್ಗವಾಗಿ ತೆರಳುತ್ತಿದ್ದಾಗ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರಿಂದ ಸಾರ್ವಜನಿಕರಿಂದ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ಕಾರ್ಯಕರ್ತರ ಮತ್ತು ಸಾರ್ವಜನಿಕರ ಸ್ವಾಗತ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪನವರು ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಶಕ್ತಿ ಗ್ಯಾರಂಟಿ ಯೋಜನೆಯಡಿ ಬಸ್ ಬಿಡುವಂತೆ ಸಚಿವರಿಗೆ ಮನವಿ ಮಾಡಿಕೊಂಡ ಮೇರಗೆ ಸಚಿವರು ಸ್ಪಂದಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಬಸ್ ಓಡಿಸುವ ಭರವಸೆ ನೀಡುತ್ತಿದ್ದಂತೆ ಕಾರ್ಯನಿರತ ಪತ್ರಕರ್ತರಿಗೂ ರಾಜ್ಯ ವ್ಯಾಪಿ ಶಕ್ತಿ ಗ್ಯಾರಂಟಿ ಭರವಸೆಯಡಿ ಉಚಿತ ಸೇವೆ ಕಲ್ಪಿಸುವಂತೆ ಮನವಿ ಮಾಡಲಾಯಿತು.ಅಲ್ಲದೆ ಶಿಕ್ಷಣ ಕ್ಷೇತ್ರದ ಹೊಸ ಅನುಭವವಾಗುತ್ತಿದ್ದು ಸಮರ್ಥವಾಗಿ ನಿರ್ವಹಿಸುವುದಾಗಿ ಹೇಳಿದರು.
ರಿಪ್ಪನ್‌ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಬಳಿ ಬಾರ್ ಅಂಡ್ ರೆಸ್ಟೋರೆಂಟ್ ಅರಂಭಿಸುತ್ತಾರೆಂಬ ಬಗ್ಗೆ ಸಾಕಷ್ಟು ಸಾರ್ವಜನಿಕರ ವಿರೋಧವಿದ್ದರೂ ಕೂಡಾ ಅಲ್ಲಿಯೇ ಅರಂಭಿಸಲು ಲೈಸನ್ಸ್ ನೀಡಿದ್ದಾರೆಂದು ಅಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲು ಅವಕಾಶ ನೀಡಬಾರದು ಎಂದು ಜುಮ್ಮಾ ಮಸೀದಿ ಸಮಿತಿಯವರು ಸಚಿವರಿಗೆ ಮನವಿ ಮೂಲಕ ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿ ಆ ಸ್ಥಳದಲ್ಲಿ ಅಂಗಡಿ ಪ್ರಾರಂಭಿಸದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾ.ಸ.ರಾಮಚದ್ರ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ,ಕಾಂಗ್ರೆಸ್ ಮುಖಂಡರಾದ ಡಿ.ಈ.ಮಧುಸೂಧನ್,ಎಂ.ಎಂ.ಪರಮೇಶ,ಗಣಪತಿಗವಟೂರು,
ಜಿ.ಆರ್.ಗೋಪಾಕೃಷ್ಣ,ಮಂಜುನಾಥಮಳವಳ್ಳಿ,ರಮೇಶ್ ಫ್ಯಾನ್ಸಿ,ಶ್ರೀಧರ, ಕಲ್ಲೂರು ತೇಜಮೂರ್ತಿ, ಖಲೀಲ್,ಧನಲಕ್ಷ್ಮಿ,ಸಾಜೀದಾ ಹನೀಪ್ ಹಾಗೂ ಇನ್ನಿತರರು ಹಾಜರಿದ್ದರು.