ತೀರ್ಥಹಳ್ಳಿ ತಾಲೂಕಿನ ಹಲವು ಮರಳು ಕ್ವಾರೆಗಳಲ್ಲಿ ನಿರಂತರವಾಗಿ ಮರಳು ಅಕ್ರಮ ಸಾಗಾಣಿಕೆ ಆಗುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಕಣ್ಣುಮುಚ್ಚಿ ಮೌನವಸ್ಥೆಯಲ್ಲಿ ಇರುವುದಕ್ಕೆ ಗೃಹಸಚಿವರ ತವರೂರಿನ ಅಕ್ರಮ ಮರಳು ಸಾಗಾಟ ಪ್ರಕರಣವೇ ಸಾಕ್ಷಿಯಾಗಿದೆ.
ಭಾನುವಾರ ಸಂಜೆಯ ವೇಳೆ ಮರಳನ್ನ ಡಬ್ಲಿಂಗ್ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನ ಯಾರೋ ಒಬ್ಬರು ಪೊಲೀಸ್ ಇಲಾಖೆ ಮಾಹಿತಿ ನೀಡಿ ಅದನ್ನು ಕುಶಾವತಿ ಬಳಿ ಹಿಡಿಸುವ ಸ್ಥಿತಿ ಬಂದಿದೆ ಎಂದರೆ ಗೃಹಸಚಿವರ ತವರಿನಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅರ್ಥವಾಗುತ್ತದೆ.
ತಾಲೂಕಿನ ಮಳಲೂರು, ಆಂದಿನಿ, ಬುಕ್ಲಾಪುರ ಪ್ರತಿದಿನ ಡಬ್ಲಿಂಗ್ ಮಾಡಲಾಗುತ್ತದೆ. ಆದರೆ ಇಲ್ಲಿ ಯಾವ ರೀತಿಯ ತಪಾಸಣೆಯೂ ನಡೆಯೊಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಫೋನೇ ತೆಗೆದು ಮಾತನಾಡೊಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ. ಹಾಗಾದರೆ ಇಲಾಖೆ ಇದ್ದು ಏನು ಮಾಡ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಪ್ರತಿದಿನ ನಡೆಯುತ್ತೆ ಡಬ್ಲಿಂಗ್ !
ಮಾಮೂಲಿಯಾಗಿ ಮರಳು ಕ್ವಾರೆ ನಿಯಮದ ಪ್ರಕಾರ 8½ ಟನ್ ಮರಳನ್ನ ಮಾತ್ರ ಲಾರಿಗೆ ತುಂಬಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನೆಲ್ಲಾ ಗಾಳಿಗೆ ತೂರಿಲಾಗಿದೆ ಒಂದು ಲಾರಿಗೆ 25 ಟನ್ ಮರಳನ್ನ ತುಂಬಲಾಗುತ್ತದೆ. ಇದನ್ನೇ ಡಬ್ಲಿಂಗ್ ಎನ್ನಲಾಗುತ್ತದೆ. ಒಂದೇ ಬಿಲ್ಲು ಹಿಡಿದು 3 ಪಟ್ಟು ಲೋಡ್ ಹೆಚ್ಚಾಗುತ್ತದೆ.
ಕೋರೆಗಳಲ್ಲಿ ಡಬ್ಲಿಂಗ್ ಮಾಡಿ ವಿಪರೀತ ಮರಳು ತುಂಬುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವುದು ಯಾವಾಗ ?
ಭಾನುವಾರ ರಾತ್ರಿ ಮೂರು ಲಾರಿಗಳನ್ನು ಸೀಜ್ ಮಾಡಿದ್ದು ಸೀಜ್ ಆದ ಪ್ರತಿ ಲಾರಿಗಳಲ್ಲಿ ಪತ್ತೆಯಾದ ಮರಳು ಬರೋಬ್ಬರಿ 25 ಟನ್ ಲೋಡು. ಹೀಗೆ ತುಂಬುವ ಲಾರಿಗಳನ್ನ ಮಾತ್ರ ಸೀಜ್ ಮಾಡುವುದು ಮಾತ್ರವಲ್ಲದೆ ಗುತ್ತಿಗೆದಾರನ ವಿರುದ್ಧ ಕ್ರಮಜರುಗಿಸಬೇಕು.
ಆದರೆ ಕ್ರಮ ಜರುಗಿಸಲು ಯಾವ ಅಧಿಕಾರಿಗಳು ಮುಂದೆ ಬರೋಲ್ಲ . ಪೂರ್ಣ ವಿಷಯ ಗೊತ್ತಿದ್ದರೂ
ಯಾವುದೇ ಕಾರಣಕ್ಕೂ ಲಾರಿಗಳನ್ನು ತಪಾಸಣೆ ಮಾಡದೇ ಮೌನವಹಿಸಿರುವುದು ತಾಲೂಕಿನ ಜನರಲ್ಲಿ ಜಗ ಜಾಹೀರಾತಾಗಿದೆ. ಅಥವಾ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಮಾತಾಗಿದೆ.
ತಾಲೂಕಿನಾದ್ಯಂತ ಹೇರಳವಾಗಿರುವ ಅಕ್ರಮ ಮರಳು ಲೂಟಿಯಾಗುವುದನ್ನು ತಡೆಯುವುದು ಯಾವಾಗ?
ತೀರ್ಥಹಳ್ಳಿಯಲ್ಲಿ ವ್ಯಾಪಕವಾಗಿ ಮರಳು ಲೂಟಿ ಆಗುತ್ತಿದೆ. ಇದು ಗೃಹಸಚಿವರಿಗೆ ಗೊತ್ತಿರದೆ ಇರಲು ಸಾಧ್ಯವೇ ಇಲ್ಲ. ಗೊತ್ತಿದ್ದೂ ಅಕ್ರಮ ಮರಳುಗಾರಿಕೆಗೆ ಇವರೇ ಕುಮ್ಮಕ್ಕು ನೀಡುತ್ತಿದ್ದರೆ ಅದಕ್ಕೆ ಯಾರು ಏನು ಮಾಡಬೇಕೋ ಗೊತ್ತಿಲ್ಲ. ಒಂದು ವೇಳೆ ಗೃಹಸಚಿವರಿಗೆ ವಿಷಯ ತಿಳಿಯದಿದ್ದರೆ ಕ್ರಮ ಜರುಗಿಸುವ ಅವಶ್ಯಕತೆ ಇದೆ.