ರಿಪ್ಪನ್‌ಪೇಟೆ : ವರಾನಹೊಂಡದ ಭೂತರಾಯ ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ|Theft
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ವರಾನಹೊಂಡದ ಭೂತರಾಯನ ಗುಡಿಯಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪಟ್ಟಣದ ತೀರ್ಥಹಳ್ಳಿ ರಸ್ತೆಯ ವರಾನಹೊಂಡದ ಶ್ರೀ ಭೂತರಾಯ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಕಳ್ಳತನ ಮಾಡಿದ್ದಾರೆ.ಭಾನುವಾರ ರಾತ್ರಿ ಕಳ್ಳತನ ನಡೆದಿರುವ ಸಾಧ್ಯತೆ ಇದೆ. ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ವರಾನಹೊಂಡದ ಭೂತರಾಯ ದೇವಸ್ಥಾನವೆಂದರೆ ಅಪಾರ ಭಕ್ತಿ ಹಾಗೂ ಭಯ, ನಂಬಿಕೆ ಇರುವ ಸ್ಥಳವಾಗಿದ್ದು ಈ ಕ್ಷೇತ್ರದಲ್ಲಿ ಕಳ್ಳರು ಕೈಚಳಕ ತೋರಿಸಿರುವುದು ಅವರ ಅವನತಿಗೆ ದಾರಿಯಾಗಿದೆ ಎಂದು…