ಶಿವಮೊಗ್ಗ | ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯ ಕೊಲೆ

ಶಿವಮೊಗ್ಗ | ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯ ಕೊಲೆ ಶಿವಮೊಗ್ಗ: ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯೊರ್ವನನ್ನು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಹೇಮಣ್ಣ(68) ಎಂದು ಗುರುತಿಸಲಾಗಿದೆ. ಹೇಮಣ್ಣರ ಮೇಲೆ ಈ ಹಿಂದೆಯು ದಾಳಿಯಾಗಿತ್ತು.ಆಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Read More

ಆರಗ ಜ್ಞಾನೇಂದ್ರ ವಿರುದ್ಧವೇ ಕೇಸುಗಳಿವೆ, ಈಗ ಅವರೇ ಗೃಹ ಮಂತ್ರಿ!!! ಹೀಗಾದರೆ ನ್ಯಾಯ ಸಿಗುತ್ತಾ? -ಕಿಮ್ಮನೆ ರತ್ನಾಕರ್ ವ್ಯಂಗ್ಯ

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಆರಗ ಜ್ಞಾನೇಂದ್ರರ ಪಾತ್ರ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್​ಕಾಯಿನ್ ವಿಷಯದಲ್ಲಿ ಗೃಹ ಸಚಿವರು ಬಾಲಿಷವಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಟ್​ಕಾಯಿನ್ ವಿಷಯದ ಗಂಭೀರತೆ ಅರಿತು ಪ್ರಧಾನಿ ಮೋದಿ ರಾತ್ರೋರಾತ್ರಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಆರಗ ಜ್ಞಾನೇಂದ್ರ ರಾಜ್ಯಕ್ಕಲ್ಲ, ತೀರ್ಥಹಳ್ಳಿಗೆ ಗೃಹ ಸಚಿವರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ…

Read More

ಯಡಿಯೂರಪ್ಪ ನೇತೃತ್ವದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ – ಸಿಎಂ ಬೊಮ್ಮಾಯಿ|CM

ತೀರ್ಥಹಳ್ಳಿ : ದೇಶದ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿ ತತ್ವ-ಸಿದ್ದಾಂತದಡಿ ಹುಟ್ಟಿ, ಅದನ್ನು ಬದಲಾಯಿಸದೇ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ದೊಡ್ಡ ಪಕ್ಷವಾಗಬೇಕಾದರೇ ಅಷ್ಟೇ ಜನರ ವಿಶ್ವಾಸ ಪಕ್ಷ ಗಳಿಸಬೇಕು. ವಿಶ್ವವೇ ಇವತ್ತು ಭಾರತದತ್ತ ನೋಡುವ ನಾಯಕತ್ವ ಬಿಜೆಪಿ ಹಾಗೂ ದೇಶಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ತಾಲೂಕಿನ ತೂದೂರು ಗ್ರಾಮದಲ್ಲಿ ಗುರುವಾರ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನಾಯಕತ್ವದ ಜೊತೆಗೆ…

Read More

ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ ಸ್ವೀಟಿ ಮಾಡಿದ್ದೇನು ಗೊತ್ತಾ?|ಸಿನಿಮೀಯ ಸ್ಟೈಲ್ ನಲ್ಲಿ ನಡೆದಿದ್ದ ರಾಬರಿ ಪ್ರಕರಣ 24 ಗಂಟೆಗಳಲ್ಲಿ ಪತ್ತೆ|arrested

ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ ಸ್ವೀಟಿ ಮಾಡಿದ್ದೇನು ಗೊತ್ತಾ?|ಬೆಂಗಳೂರು ಸ್ಟೈಲ್ ನಲ್ಲಿ ನಡೆದಿದ್ದ ರಾಬರಿ ಪ್ರಕರಣ 24 ಗಂಟೆಗಳಲ್ಲಿ ಪತ್ತೆ ಶಿವಮೊಗ್ಗ ಸಿಟಿಯಲ್ಲಿ ಬೆಂಗಳೂರು ಸ್ಟೈಲ್​ನಲ್ಲಿ ನಡೆದಿದ್ದ ರಾಬರಿ ಪ್ರಕರಣವನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಂಗಳಮುಖಿಯನ್ನು ಅರೆಸ್ಟ್ ಮಾಡಿದ್ದು, ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ.  ನಡೆದಿದ್ದೇನು?  ಇವತ್ತಿಗೆ ಎರಡು ದಿನಗಳ ಹಿಂದೆ, ಅಂದರೆ ದಿನಾಂಕ: 19-08-2023 ರ ಮಧ್ಯರಾತ್ರಿ 01-15 ಸುಮಾರಿಗೆ ವ್ಯಕ್ತಿಯೊಬ್ಬರು  ಶಿವಮೊಗ್ಗ ಎನ್.ಟಿ…

Read More

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಕಲಬುರಗಿ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ.ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ…

Read More

ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ : ಪಿಗ್ಮಿ ಸಂಗ್ರಹಕ ಸುನೀಲ್ ಸಾವು

ತೀರ್ಥಹಳ್ಳಿ ಸಮೀಪದ ಗುಡ್ಡೇಕೇರಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಕೈಮರದ ಸೊಸೈಟಿಯ ಪಿಗ್ಮಿ ಸಂಗ್ರಾಹಕ ಸುನೀಲ್ ಸಾವು ಕಂಡಿದ್ದಾರೆ. ಕೈಮರದಿಂದ ಗುಡ್ಡೇಕೇರಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಸುನೀಲ್ ಗೆ ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಬೊಲೇನೋ ಕಾರು ಡಿಕ್ಕಿ ಹೊಡೆದಿದೆ. ಮುಖಾಮುಖಿ ಅಪಘಾತದಲ್ಲಿ ಕಾರಿನ ಮುಂಭಾಗ ಹಾನಿಯಾಗಿದೆ. ಬೈಕ್ ನುಜ್ಜುಗುಜ್ಜಾಗಿದೆ. ಗಾಯಾಳು ಸುನೀಲ್ ಗೆ ತೀವ್ರತರನಾದ ಗಾಯಗಳಾಗಿದ್ದು ಸ್ಥಳೀಯರೇ ಆತನನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ…

Read More

ಗೃಹ ಸಚಿವರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಮರೀಚಿಕೆಯಾದ ಮೂಲ ಸೌಕರ್ಯ – ಮಾದ್ಲುಮನೆ ,ಉಂಬ್ಳೆಬೈಲ್ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ದಶಕಗಳಿಂದ ಮರೀಚಿಕೆಯಾದ ಮೂಲ ಸೌಕರ್ಯ – ಮಾದ್ಲುಮನೆ ,ಉಂಬ್ಳೆಬೈಲ್ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿಯ ಮೂಲಸೌಕರ್ಯ ವಂಚಿತ ಮಾದ್ಲುಮನೆ ,ಉಂಬ್ಳೆಬೈಲು ಗ್ರಾಮಸ್ಥರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.  60 ವರ್ಷಗಳಿಂದ ಗ್ರಾಮ ಮೂಲಭೂತ ಸೌಕರ್ಯ ವಂಚಿತವಾಗಿದ್ದು, ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳ ಸುಳ್ಳು ಭರವಸೆಗಳಿಗೆ ತುತ್ತಾಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುಳ್ಳು ಭರವಸೆಗಳಿಂದ ಬೇಸತ್ತಿರುವ ಗ್ರಾಮಸ್ಥರು, ಸಾಮೂಹಿಕವಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಗ್ರಾಮಸ್ಥರಿಗೆ ಚುನಾವಣೆಯನ್ನು ಬಹಿಷ್ಕರಿಸಲು…

Read More

ಚಾಲಕನ ಜೊತೆ ಮಕ್ಕಳನ್ನು ಕರೆದುಕೊಂಡು ಮಹಿಳೆ ಪರಾರಿ : ಮಕ್ಕಳನ್ನು ಹುಡುಕಿಕೊಡುವಂತೆ ಪತಿಯಿಂದ ಕಣ್ಣೀರು|missing

ಪತಿಯನ್ನು ಬಿಟ್ಟು ತಾನು ಕೆಲಸ ನಿರ್ವಹಿಸುತಿದ್ದ ಸಂಸ್ಥೆಯ ಚಾಲಕನೊಂದಿಗೆ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಘಟನೆಯಿಂದ ನೊಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.  ಶಿಕಾರಿಪುರ ತಾಲೂಕಿನ ಪುಣೇದಹಳ್ಳೀ ಗ್ರಾಮದಲ್ಲಿ ಪರಶುರಾಮ್ ಮತ್ತು ಶಾರದಾ ದಂಪತಿ ವಾಸವಾಗಿದ್ದರು. ಕಳೆದ 13 ವರ್ಷದ ಹಿಂದೆ  ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮಕ್ಕಳ ದಾಖಲಾತಿಗಳನ್ನು ತೆಗೆದುಕೊಂಡು ಶಾಲೆಗೆ ಹೋಗಿದ್ದ ಮಹಿಳೆ ಅಲ್ಲಿಂದ…

Read More

ರಿಪ್ಪನ್‌ಪೇಟೆ : ದನದ ಕೊಟ್ಟಿಗೆಯ ಹಂಚನ್ನು ಕಿತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಬ್ಬಲ್ ಮರ್ಡರ್​ ಬೆದರಿಕೆ !!! ಪ್ರಕರಣ ದಾಖಲು|assault

ರಿಪ್ಪನ್‌ಪೇಟೆ : ದನದ ಕೊಟ್ಟಿಗೆಯ ಹಂಚು ಕಿತ್ತುಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಈ ಮನೆಯಲ್ಲಿ ಎರಡು ಕೊಲೆಯಾಗುತ್ತದೆ ಎಂದು ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿನ ಸಮೀಪದ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ಬೆನವಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯ ಹಂಚನ್ನು ಚಂದ್ರಪ್ರಸಾದ್ ಎಂಬವರು ಏಕಾಏಕಿ  ಕಿತ್ತುಹಾಕಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ಸಂತ್ರಸ್ತರು ಪ್ರಶ್ನಿಸಿದ್ದಾರೆ. ಈ ವೇಳೇ ಅವರನ್ನು ನಿಂದಿಸಿದ್ದಷ್ಟೆ ಅಲ್ಲದೆ, ಈ ಮನೆಯಲ್ಲಿ ಎರಡು ಕೊಲೆಯಾಗಲಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು…

Read More

ಕಪ್ಪೆ ಜೊತೆಗೆ ಪ್ಲಾಸ್ಟಿಕ್ ನುಂಗಿದ್ದ ನಾಗರಹಾವು – ಉರಗ ರಕ್ಷಕನಿಂದ ರಕ್ಷಣೆ | Snake rescue

ಕಪ್ಪೆ ಜೊತೆಗೆ ಪ್ಲಾಸ್ಟಿಕ್ ನುಂಗಿದ್ದ ನಾಗರಹಾವು – ಉರಗ ರಕ್ಷಕನಿಂದ ರಕ್ಷಣೆ ಕಪ್ಪೆ ಜತೆ ಪ್ಲಾಸ್ಟಿಕ್ ಕವರ್ ನುಂಗಿದ್ದ ಹಾವು ಒದ್ದಾಡುತ್ತಿದ್ದನ್ನು ಕಂಡು ಉರಗ ರಕ್ಷಕರೊಬ್ಬರು ರಕ್ಷಿಸಿದ್ದಾರೆ. ಭದ್ರಾವತಿಯ ಬಸವೇಶ್ವರ ಸರ್ಕಲ್‌ ನಲ್ಲಿ ಕೆರೆಗೊಡ್ಡು ಹಾವು ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಅತ್ತಿತ್ತ ಹೋಗಲಾಗದೆ ನಿತ್ರಾಣಗೊಂಡು ಲಾರಿಯೊಂದರ ಅಡಿ ಸೇರಿತ್ತು. ವಿಷಯ ತಿಳಿಯುತ್ತಿದ್ದಂತೆ ಉರಗ ರಕ್ಷಕ ಪ್ರಹ್ಲಾದ್ ರಾವ್ ಅವರು ಹಾವು ಹಿಡಿದು ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ. “ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಹಾವು ತನ್ನ ಆಹಾರವನ್ನು…

Read More