Headlines

ಆಯನೂರು ಬಾರ್ ಕ್ಯಾಶಿಯರ್’ಗೆ ಚೂರಿ ಇರಿದು ಕೊಲೆ – ಪೊಲೀಸರ ಎದುರಲ್ಲೇ ನಡೆಯಿತಾ ಈ ಘಟನೆ…????

ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆಯನೂರಿನಲ್ಲಿರುವ ಬಾರ್’ನಲ್ಲಿ ಕ್ಯಾಶಿಯರ್ ಒಬ್ಬನಿಗೆ ಪೊಲೀಸರೆದುರಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಸೊರಬ ಮೂಲದ ಸಚಿನ್ (27) ಹತ್ಯೆಯಾದ ಯುವಕನಾಗಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಚಾಕುದಿಂದ ಚುಚ್ಚಿದ್ದು ತೀವ್ರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.

ಘಟನೆಯ ಹಿನ್ನಲೆ

ಕಳೆದ ಹಲವು ದಿನಗಳಿಂದ ಬಾರ್ ನಲ್ಲಿ ಕುಡಿದು ಹಣ ನೀಡದ ಹೋಗುತ್ತಿದ್ದ ಆಯನೂರು ತಾಂಡಾ ನಿವಾಸಿಗಳಾದ ನಿರಂಜನ್ ,ಸತೀಶ್ ಹಾಗೂ ಅಶೋಕ್ ಕಳೆದ ರಾತ್ರಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದ ವರೆಗೂ ಮದ್ಯಪಾನ ಮಾಡುತ್ತಿದ್ದರು.

ಬಾರ್ ಬಂದ್ ಮಾಡುವ ಸಮಯವಾದರೂ  ಯುವಕರು ಮದ್ಯಪಾನ ಮಾಡುತ್ತಲೇ‌ ಇದ್ದರು. ಬಾರ್ ಸಿಬ್ಬಂದಿ ಅವರ ಬಳಿ ತೆರಳಿ ಸಮಯವಾಯಿತು ಎಂದು ತಿಳಿಸಿದ್ದಾರೆ. ಆದರೆ, ತಾವಿನ್ನೂ ಮದ್ಯ ಸೇವಿಸಬೇಕೆಂದು ಹೇಳಿ ಕಳುಹಿಸಿದ್ದಾರೆ.

ಸಹಾಯಕ ಕ್ಯಾಶಿಯರ್ ಬಂದು ಸಮಯವಾಯಿತು ಎಂದು ತಿಳಿಸಿದರೂ ಯುವಕರು ಕೇಳಲಿಲ್ಲ. ತಕ್ಷಣ ಆತ 112 ಪೊಲೀಸ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಬಂದಿದ್ದೇ ಕ್ಯಾಶಿಯರ್ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ವೇಳೆ ಯುವಕರಲ್ಲಿ ಒಬ್ಬ ಬೀಯರ್ ಬಾಟಲಿಯಿಂದ ಸಹಾಯಕ‌ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದಾನೆ.‌ ಅವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ವೇಳೆ‌ ಮತ್ತೊಬ್ಬ ಯುವಕ ಚಾಕುದಿಂದ ಕ್ಯಾಶಿಯರ್’ಗೆ ಏಕಾಏಕಿ ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಆಯನೂರು ಆಸ್ಪತ್ರೆಗೆ ಸಚಿನ್ ನನ್ನು ಕರೆತಂದು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಸಚಿನ್‌ ನನ್ನು ಶಿವಮೊಗ್ಗಕ್ಕೆ ರವಾನಿಸಲಾಯಿತು.

ಆದರೆ ಶಿವಮೊಗ್ಗಕ್ಕೆ ಸಾಗಿಸುತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಸಚಿನ್ ಕೊನೆ ಉಸಿರೆಳೆದಿದ್ದಾನೆ.

ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author

Leave a Reply

Your email address will not be published. Required fields are marked *