ಗತ್ತು ಗೈರತ್ತು ತೋರದೆ ಸದಾ ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಪೂರಕ – ಆರಗ ಜ್ಞಾನೇಂದ್ರ|araga

ಗತ್ತು ಗೈರತ್ತು ತೋರದೆ ಸದಾ ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಪೂರಕ – ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ;-ಗೃಹ ಸಚಿವನಾಗಿ ಕ್ಷೇತ್ರದ ರಾಜ್ಯ ಸುತ್ತಿದರೂ ಕೂಡಾ ಕ್ಷೇತ್ರದ ಮತದಾರರ ಮತ್ತು ಕಾರ್ಯಕರ್ತರ  ಮೂಲಭೂತ  ಸಮಸ್ಯೆಗಳಿಗೆ ಸ್ಪಂದಿಸಿ ಗತ್ತು ಗೈರತು ಜನರೊಂದಿಗೆ ಬೆರತು ಪ್ರೀತಿ ವಿಶ್ವಾಸದಿಂದಿರುವುದಕ್ಕೆ ಮರು ಅಯ್ಕೆ ಮಾಡಿದ್ದಾರೆಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆದ್ದಾರಿಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ  ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅಭಿನಂದನಾ ಸಭೆಯನ್ನುದ್ದೇಶಿ ಮಾತನಾಡಿ ಹಾವು ಮುಗಿಸಿಯಂತಿದ್ದ ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥಗೌಡ ಚುನಾವಣೆಯ ಸಂದರ್ಭದಲ್ಲಿ ಜೋಡೆತ್ತುಗಳಾಗಿ ಒಂದೇ ಹಾರಕ್ಕೆ ಕೊರಳು ಒಡ್ಡಿದರೂ  ಕೂಡಾ ಕ್ಷೇತ್ರದ ಮತದಾರರು 
ನನ್ನ ಕೈಬಿಡದೆ ಗೆಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರ ಋಣವನ್ನು ನಾನು ತೀರಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೇಸ್ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ ಎಂದ ಅವರು 60 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತದಾರರಲ್ಲಿ ಹೇಳಿಕೊಳ್ಳುವಂತಂಹ ಸಾಧನೆಗಳೇನು ಇರಲ್ಲಿಲ್ಲ ಗ್ಯಾರಂಟಿ ಕಾರ್ಡ್ ಮೂಲಕ ಮತದಾರರಿಗೆ ಅಸೆ ತೋರಿಸುವ ದುಸ್ಥಿತಿ ಕಾಂಗ್ರೇಸ್ ಪಕ್ಷಕ್ಕೆ ಬಂದಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ದೊಡ್ಡಣ್ಣನಂತಿರುವ ಅಮೇರಿಕಾ ಸೇರಿದಂತೆ ಇತರ ರಾಷ್ಟçಗಳು ಹಾಡಿ ಹೊಗುಳು ಮೂಲಕ ಗೌರವ ತೋರಿಸುತ್ತಿದ್ದರೆ ನಮ್ಮ ದೇಶದ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕ ಸಂಸದ ರಾಹುಲ್‌ಗಾಂಧಿಯವರು ವಿದೇಶದಲ್ಲಿ ದೇಶದ ಪ್ರದಾನಿಯ ವಿರುದ್ದ ಅವಹೇಳನವಾಗಿ ಹೇಳಿಕೆ ನೀಡುತ್ತಿರುವುದು ಅವರ ಪಕ್ಷದ ಘನತೆ ಗೌರವನ್ನು ಬಿಂಬಿಸುತ್ತದೆAದು ವಿಷಾದವ್ಯಕ್ತಪಡಿಸಿ ನಾಡಿನ ಮತದಾರರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷದ ನಾಟಕ ಗೊತ್ತಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಅಭಿವೃದ್ದಿ ಕಾರ್ಯಗಳಿಗೆ ಹಿಂದಿನ ಸರ್ಕಾರ ಬಿಡುಗಡೆ ಮಾಡಿದಂತಹ ಅನುಧಾನವನ್ನು ತಡೆಹಿಡಿದಿರುವುದರಿಂದ ಕ್ಷೇತ್ರದಲ್ಲಿ 200 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾರ್ಯಗಳಿಗೆ ಭಾರಿ ಹಿನ್ನಡೆಯಾಗಿದೆ ಎಂದು ಸಭೆಯಲ್ಲಿ ವಿವರಿಸಿ ಏನೇ ಅದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ವಿರೋಧ ಪಕ್ಷದಲ್ಲಿದ್ದರೂ ಕೂಡಾ ಅಭಿವೃದ್ದಿಯೇ ನಮ್ಮ ಮೂಲದ್ಯೇಯವಾಗಿದ್ದು ಅದನ್ನು ಸಾಧ್ಯಯವಾದಷ್ಟು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಮ್ಮ,ಉಪಾಧ್ಯಕ್ಷೆ ಲಲಿತಾಪುಂಡಲೀಕ್,ಪಕ್ಷದ ಮುಖಂಡರಾದ ಕಲ್ಲೂರು ನಾಗೇಂದ್ರ,ರಾಮಪ್ಪ,ಕುಮಾರಸ್ವಾಮಿ, ಕೆ.ವಿ.ಲಿಂಗಪ್ಪಕಗ್ಗಲಿ,ವಿಶು, ಗಿರೀಶ್ ಜಂಬಳ್ಳಿ,ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *