ಕಪ್ಪೆ ಜೊತೆಗೆ ಪ್ಲಾಸ್ಟಿಕ್ ನುಂಗಿದ್ದ ನಾಗರಹಾವು – ಉರಗ ರಕ್ಷಕನಿಂದ ರಕ್ಷಣೆ | Snake rescue

ಕಪ್ಪೆ ಜೊತೆಗೆ ಪ್ಲಾಸ್ಟಿಕ್ ನುಂಗಿದ್ದ ನಾಗರಹಾವು – ಉರಗ ರಕ್ಷಕನಿಂದ ರಕ್ಷಣೆ


ಕಪ್ಪೆ ಜತೆ ಪ್ಲಾಸ್ಟಿಕ್ ಕವರ್ ನುಂಗಿದ್ದ ಹಾವು ಒದ್ದಾಡುತ್ತಿದ್ದನ್ನು ಕಂಡು ಉರಗ ರಕ್ಷಕರೊಬ್ಬರು ರಕ್ಷಿಸಿದ್ದಾರೆ.

ಭದ್ರಾವತಿಯ ಬಸವೇಶ್ವರ ಸರ್ಕಲ್‌ ನಲ್ಲಿ ಕೆರೆಗೊಡ್ಡು ಹಾವು ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಅತ್ತಿತ್ತ ಹೋಗಲಾಗದೆ ನಿತ್ರಾಣಗೊಂಡು ಲಾರಿಯೊಂದರ ಅಡಿ ಸೇರಿತ್ತು.


ವಿಷಯ ತಿಳಿಯುತ್ತಿದ್ದಂತೆ ಉರಗ ರಕ್ಷಕ ಪ್ರಹ್ಲಾದ್ ರಾವ್ ಅವರು ಹಾವು ಹಿಡಿದು ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ. “ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಹಾವು ತನ್ನ ಆಹಾರವನ್ನು ಹೊರ ಹಾಕುವ ಸಾಮರ್ಥ್ಯ ಹೊಂದಿದೆ. ಆದರೆ ಪ್ಲಾಸ್ಟಿಕ್ ಹೊರ ತೆಗೆಯಲು ಆಗುವುದಿಲ್ಲ. ಅದು ಅಲ್ಲಿಯೇ ಸಾವನ್ನಪ್ಪುತ್ತಿತ್ತು. ಹಾವನ್ನು ಹಿಡಿದು ಕೂಡಲೆ ಪ್ಲಾಸ್ಟಿಕ್ ಹೊರ ತೆಗೆದು, ಬಿಡಲಾಯಿತು. ಹಾವು ಚೇತರಿಸಿಕೊಂಡಿದೆ’ ಎಂದು ತಿಳಿಸಿದರು.

ಪ್ರಹ್ಲಾದ್ ರಾವ್ ಅವರು ಶ್ರೀ ಕಾಳಿಕಾಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಆಭರಣ ಪರಿವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹಾವುಗಳ ರಕ್ಷಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *