Headlines

ಪದವಿ‌ ಕಾಲೇಜಿನ ಬಳಿ ತಂಬಾಕು ಮಾರಾಟ – ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ | GKB

ಪದವಿ‌ ಕಾಲೇಜಿನ ಬಳಿ ತಂಬಾಕು ಮಾರಾಟ – ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ


ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಗುಟ್ಕ, ಪಾನ್, ಸಿಗರೇಟ್ ಮಾರುತ್ತಿದ್ದ ಅಂಗಡಿಗೆ ಧಿಡೀರ್ ಭೇಟಿ ಕೊಟ್ಟ ಶಾಸಕ ಗೋಪಾಲ ಕೃಷ್ಣ ಬೇಳೂರು ತಂಬಾಕು ಮಾರಾಟ ಮಾಡುತಿದ್ದ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು ರವರು ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿ ಗುಟ್ಕ, ಪಾನ್, ಸಿಗರೇಟ್ ಮಾರುತ್ತಿದ್ದ ಅಂಗಡಿಗೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.


ಸದರಿ ಅಂಗಡಿಯು ಕಾಲೇಜಿಗೆ 100 ಮೀಟರ್ ಒಳಗೆ ಇರುವುದರಿಂದ ತಂಬಾಕು ಮಾರಾಟಕ್ಕೆ ಅವಕಾಶವಿಲ್ಲ. ಹಾಗಾಗಿ ಹಾಲಿ ಅಂಗಡಿ ಮಾರಾಟಗಾರನಿಗೆ ತೆರವುಗೊಳಿಸಲು ತಾಕೀತು ಮಾಡಿದ್ದಾರೆ.

ಶಾಲಾ-ಕಾಲೇಜು ಸಮೀಪಗಳಲ್ಲಿ ಗುಟ್ಕ, ಪಾನ್ , ಸಿಗರೇಟ್ ಮಾರುವುದು ಅಪರಾದ ಇವೆಲ್ಲವೂ ಮಕ್ಕಳ ಶೈಕ್ಷಣಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವುದು ಇವೆಲ್ಲವೂ ಸಮಾಜಕ್ಕೆ ಮಾರಕ ಎಂಬ ಕಾರಣಕ್ಕೆ ಶಾಸಕರ ಭೇಟಿ ಮಹತ್ವ ಪಡೆದುಕೊಂಡಿದೆ.

About The Author

Leave a Reply

Your email address will not be published. Required fields are marked *